ವಿದೇಶ

2020 ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಸ್ಪರ್ಧೆ

Nagaraja AB

ವಾಷಿಂಗ್ಟನ್: 2020ರಲ್ಲಿ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕಮಲಾ ಹ್ಯಾರಿಸ್ ಹೇಳಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್  ಟ್ರಂಪ್  ಆಡಳಿತಾವಧಿಯಲ್ಲಿ ನಡೆದ ಅನ್ಯಾಯಗಳ ವಿರುದ್ಧ ಹೋರಾಡುವ  ಸಂದರ್ಭ ಬಂದಿದೆ ಎಂದು ಅವರು ಹೇಳಿದ್ದಾರೆ.

 ಕಮಲಾ ಹ್ಯಾರಿಸ್  ಪ್ರಚಾರದ ವಿಡಿಯೋವನ್ನು ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಮುಂದಿನ ಜೀವನ ನೆಮ್ಮದಿಯಿಂದ ಕೂಡಿರಲು ತಮ್ಮನ್ನು ಬೆಂಬಲಿಸುವಂತೆ ಬೆಂಬಲಿಗರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

ನ್ಯಾಯ, ಯೋಗ್ಯತೆ,  ಸಮಾನತೆ,  ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಇವುಗಳ ಕೇವಲ ಶಬ್ದಗಳಲ್ಲ. ಅಮೆರಿಕನ್ನರು ಪಾಲಿಸುವಂತಹ ಮೌಲ್ಯಗಳು ಇವೇ. ಇವುಗಳೆಲ್ಲವೂ ಈಗ ಸಾಲಿನಲ್ಲಿವೆ ಎಂದು ಹ್ಯಾರಿಸ್ ಹೇಳಿದ್ದಾರೆ.

ಮುಂದಿನ ದೇಶದ ಭವಿಷ್ಯ  ಪ್ರಜೆಗಳು ಹಾಗೂ ಅಮೆರಿಕದ ನಾಗರಿಕರ ಮೌಲ್ಯಗಳಿಗಾಗಿ ಹೋರಾಡಲು ಧ್ವನಿ ಎತ್ತುವ ಇತರರನ್ನು ಅವಲಂಬಿಸಿದೆ. ಅದಕ್ಕಾಗಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ   ಡೆಮಾಕ್ರಟಿಕ್ ಕ್ಯಾಲಿರ್ಪೋನಿಯಾ ಸೆನೆಟರ್ ಹೇಳಿದ್ದಾರೆ.

ಕಮಲಾ ಹ್ಯಾರಿಸ್  ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊದಲ ಆಫ್ರಿಕನ್- ಅಮೆರಿಕಾದ ಮಹಿಳೆಯಾಗಿದ್ದಾರೆ.

SCROLL FOR NEXT