ನ್ಯೂಯಾರ್ಕ್: 2019ನೇ ಸಾಲಿನ ಜಾಗತಿಕ ಆವಿಷ್ಕಾರ ಸೂಚ್ಯಂಕ(ಜಿಐಐ) ಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು, ದಕ್ಷಿಣ ಕೊರಿಯಾ ಅಗ್ರ ಸ್ಥಾನದಲ್ಲಿದ್ದು, ಭಾರತ 54ನೇ ಸ್ಥಾನ ಪಡೆದಿದೆ.
2018ರಲ್ಲಿ 57ನೇ ಸ್ಥಾನ ಪಡೆದಿದ್ದ ಭಾರತ ಈ ವರ್ಷ ಮತ್ತೆ ಉನ್ನತ ಸ್ಥಾನಕ್ಕೆ ಜಿಗಿದಿದೆ. 2015ರಿಂದ ಜಿಐಐ ಶ್ರೇಯಾಂಕದಲ್ಲಿ ಭಾರತ ಸತತವಾಗಿ ಏರುಗತಿಯಲ್ಲಿ ಸಾಗುತ್ತಿದೆ.
ಜಿಐಐ ಶ್ರೇಯಾಂಕದಲ್ಲಿ ದಕ್ಷಿಣ ಕೊರಿಯಾ ಮೊದಲ ಸ್ಥಾನ ಪಡೆದರ, ಜರ್ಮನಿ ಎರಡನೇ ಸ್ಥಾನ ಹಾಗೂ ಫಿನ್ ಲ್ಯಾಂಡ್ ಮೂರನೇ ಸ್ಥಾನ ಪಡೆದಿದೆ.
ಸ್ವಿಜಲ್ರ್ಯಾಂಡ್, ಅಮೆರಿಕ, ಸ್ವೀಡನ್, ಸಿಂಗಾಪುರ, ಫ್ರಾನ್ಸ್, ಇಸ್ರೆಲ್ ಹಾಗೂ ಜಪಾನ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 2018ರಲ್ಲಿ 19ನೇ ಸ್ಥಾನದಲ್ಲಿದ್ದ ಚೀನಾ, ಈ ವರ್ಷ 16ನೇ ಸ್ಥಾನಕ್ಕೆ ಭಡ್ತಿ ಪಡೆದಿದೆ.
ವಿಶ್ವದಾದ್ಯಂತ ಆವಿಷ್ಕಾರ ಕ್ಷೇತ್ರವನ್ನು ಒಳನೋಟಕ್ಕೆ ಒಳಪಡಿಸುವ ಉದ್ಯಮ ಕ್ಷೇತ್ರದ ಅಧಿಕಾರಿಗಳು, ನೀತಿ ರೂಪಕರು ಮತ್ತು ಇತರರಿಗೆ ಜಿಐಐ ಶ್ರೇಯಾಂಕ ಪ್ರಮುಖ ಮಾನದಂಡವಾಗಿದೆ. ನಿರಂತರವಾಗಿ ಅಭಿವೃದ್ಧಿಯ ಮೌಲ್ಯಮಾಪನ ಮಾಡಲು ಜಾಗತಿಕ ಆವಿಷ್ಕಾರ ಸೂಚ್ಯಂಕವನ್ನು ಬಳಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics