ಅಮೆರಿಕಾದಲ್ಲಿ ಹಿಂದೂ ದೇವಾಲಯ ಭಗ್ನ: ದೇವರ ಮೂರ್ತಿಗೆ ಮಸಿ, ಗೋಡೆ ಮೇಲೆ ಅಶ್ಲೀಲ ಬರಹ! 
ವಿದೇಶ

ಅಮೆರಿಕಾದಲ್ಲಿ ಹಿಂದೂ ದೇವಾಲಯ ಭಗ್ನ: ದೇವರ ಮೂರ್ತಿಗೆ ಮಸಿ, ಗೋಡೆ ಮೇಲೆ ಅಶ್ಲೀಲ ಬರಹ!

ಅಮೆರಿಕಾದ ಕೆಂಟುಕಿಯಲ್ಲಿರುವ ಹಿಂದೂ ದೇವಾಲಯವನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದು ಮೂರ್ತಿಗೆ ಕಪ್ಪು ಬಣ್ಣ ಬಳಿದದ್ದಲ್ಲದೆ ಗೋಡೆ ಮೇಲೆ....

ವಾಷಿಂಗ್ಟನ್: ಅಮೆರಿಕಾದ ಕೆಂಟುಕಿಯಲ್ಲಿರುವ ಹಿಂದೂ ದೇವಾಲಯವನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದು ಮೂರ್ತಿಗೆ ಕಪ್ಪು ಬಣ್ಣ ಬಳಿದದ್ದಲ್ಲದೆ ಗೋಡೆ ಮೇಲೆ ಅಶ್ಲೀಲ ಸಂದೇಶ ಬರೆದಿರುವ ಘಟನೆ ವರದಿಯಾಗಿದೆ.
ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು ಕೆಂಟುಕಿಯಲ್ಲಿರುವ ಸ್ವಾಮಿನಾರಾಯಣ ದೇವಾಲಯದಲ್ಲಿ ಈ ಕೃತ್ಯ ಎಸಗಲಾಗಿದೆ. ದೇವಾಲಯದ ಮೂರ್ತಿಗೆ ಕಪ್ಪು ಬಣ್ನ ಬಳಿದಿದ್ದ ದುಷ್ಕರ್ಮಿಗಳು ಆವರಣದಲ್ಲಿನ ಕುರ್ಚಿಗಳನ್ನು ಚಾಕುವಿನಿಂದ ಹಾನಿಗೊಳಿಸಿದ್ದಾರೆ.
ಅಲ್ಲದೆ ಕಿಟಕಿಗಳನ್ನು ಒಡೆದು ಹಾಕಿರುವ ಕಿಡಿಗೇಡಿಗಳು ಗೋಡೆಯ ಮೇಲೆ ಅವಹೇಳನಕಾರಿ ಬರಹ ಬರೆದಿದ್ದಾರೆ.
ಕೆಂಟುಕಿಯ ಲೂಯಿಸ್ ವಿಲ್ಲೆಯಲ್ಲಿರುವ ಭಾರತೀಯರು ಈ ಘಟನೆಯಿಂದ ಆಘಾತಗೊಂಡಿದ್ದಾರೆ. ಲೂಯಿಸ್‍ವಿಲ್ಲೆ ಮೇಯರ್ ಗ್ರೆಗ್ ಫಿಷರ್, ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿದ್ದಾರೆ. ಸದ್ಯ ಅಮೆರಿಕಾ ತನಿಖಾ ದಳ ಘಟನೆ ಸಂಬಂಧ ತನಿಖೆ ಕೈಗೊಂಡಿದ್ದಾಗಿ ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT