ಪ್ರಧಾನಿ ಮೋದಿ - ಡೋನಾಲ್ಡ್ ಟ್ರಂಪ್ 
ವಿದೇಶ

'ಇನ್ನು ಸಹಿಸೋಕಾಗಲ್ಲ': ಭಾರತದ ವಿರುದ್ಧ ಮತ್ತೆ ಗುಡುಗಿದ ಡೊನಾಲ್ಡ್ ಟ್ರಂಪ್

ಭಾರತ, ಅಮೆರಿಕದ ಉತ್ಪನ್ನಗಳಿಗೆ ಅಧಿಕ ಆಮದು ಸುಂಕ ವಿಧಿಸುತ್ತಿದ್ದು, ಇನ್ನು ಮುಂದೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೆ ಗುಡುಗಿದ್ದಾರೆ.

ವಾಷಿಂಗ್ಟನ್: ಭಾರತ, ಅಮೆರಿಕದ ಉತ್ಪನ್ನಗಳಿಗೆ ಅಧಿಕ ಆಮದು ಸುಂಕ ವಿಧಿಸುತ್ತಿದ್ದು, ಇನ್ನು ಮುಂದೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೆ ಗುಡುಗಿದ್ದಾರೆ.
ಅಮೆರಿಕದ ಉತ್ನನ್ನಗಳ ಮೇಲೆ ಹೆಚ್ಚು ಆಮದು ಸುಂಕ ವಿಧಿಸುವ ಮೂಲಕ ಭಾರತ ಅಮೆರಿಕದಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ಉಭಯ ದೇಶಗಳು ವ್ಯಾಪಾರ ಭಿನ್ನಾಭಿಪ್ರಾಯಗಳ ಕುರಿತು ಮತ್ತೆ ಮಾತುಕತೆ ನಡೆಸಲಿವೆ. ಭಾರತ ಅಮೆರಿಕದ ಉತ್ಪನ್ನಗಳಿಗೆ ಅಧಿಕ ಸುಂಕ ವಿಧಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ರಂಪ್ ಟ್ವೀಟ್‌ ಮಾಡಿದ್ದಾರೆ.
ಒಸಾಕಾದಲ್ಲಿ ನಡೆದ ಜಿ -20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಮಾತುಕತೆಯ ಮುಂದುವರಿದ ಭಾಗವಾಗಿ ಯುಎಸ್ಟಿಆರ್ (ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್) ಅಧಿಕಾರಿಗಳು ಮುಂದಿನ ಎರಡು ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದರ ಬೆನ್ನಲ್ಲೇ ಟ್ರಂಪ್‌ ಈ ಹೇಳಿಕೆ ಹೊರಬಿದ್ದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

H1B ವೀಸಾ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಲುಟ್ನಿಕ್

ಗಾಜಾ ಸಂಘರ್ಷ ಕೊನೆಗೆ ಡೊನಾಲ್ಡ್ ಟ್ರಂಪ್ 20 ಅಂಶಗಳ ಯೋಜನೆ: ಪ್ರಧಾನಿ ಮೋದಿ ಸ್ವಾಗತ

ಪುರುಷರ Asia Cup ಹೈಡ್ರಾಮಾ: ಮಹಿಳಾ ವಿಶ್ವಕಪ್ ನಲ್ಲಿ ಏನಾಗುತ್ತದೆ,ಅ.5ರ ಪಂದ್ಯ ಮೇಲೆ ಎಲ್ಲರ ಚಿತ್ತ

ನೆತನ್ಯಾಹು-ಟ್ರಂಪ್ ಗಾಜಾ ಶಾಂತಿ ಒಪ್ಪಂದ ಘೋಷಣೆ: ಹಂತ ಹಂತವಾಗಿ ಹಿಂದೆ ಸರಿಯಲಿರುವ ಇಸ್ರೇಲ್

ಕಲ್ಯಾಣ ಕರ್ನಾಟಕದಲ್ಲಿ ಭಾರೀ ಪ್ರವಾಹ: ಹಾನಿ ಬಗ್ಗೆ ಕುರಿತು ಇಂದು ಸಿಎಂ ವೈಮಾನಿಕ ಸಮೀಕ್ಷೆ

SCROLL FOR NEXT