ಸಂಗ್ರಹ ಚಿತ್ರ 
ವಿದೇಶ

ಒಳ್ಳೆ ಸುದ್ದಿ! ಗ್ರೀನ್ ಕಾರ್ಡ್‌ ಮೇಲಿನ ಮಿತಿಯನ್ನು ತೆಗೆದುಹಾಕುವ ಮಸೂದೆ ಯುಎಸ್ ಸಂಸತ್ತಿನಲ್ಲಿ ಅಂಗೀಕಾರ

ಯುನೈಟೆಡ್ ಸ್ಟೇಟ್ಸ್ ಸಂಸದರು ಬುಧವಾರ ಗ್ರೀನ್ ಕಾರ್ಡ್‌ಗಳನ್ನು ನೀಡುವಲ್ಲಿ ಪ್ರಸ್ತುತ ಏಳು ಪ್ರತಿಶತದಷ್ಟು ಇರುವ ಮಿತಿಯನ್ನು ತೆಗೆದುಹಾಕುವ ಬಗೆಗೆ ಮಹತ್ವದ ಮಸೂದೆಯನ್ನು ಅಂಗೀಕರಿಸಿದ್ದಾರೆ.

ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್ ಸಂಸದರು ಬುಧವಾರ ಗ್ರೀನ್ ಕಾರ್ಡ್‌ಗಳನ್ನು ನೀಡುವಲ್ಲಿ ಪ್ರಸ್ತುತ ಏಳು ಪ್ರತಿಶತದಷ್ಟು ಇರುವ ಗರಿಷ್ಟ ಮಿತಿಯನ್ನು ತೆಗೆದುಹಾಕುವ ಬಗೆಗೆ ಮಹತ್ವದ ಮಸೂದೆಯನ್ನು ಅಂಗೀಕರಿಸಿದ್ದಾರೆ.ಇದರಿಂದ ಸಾವಿರಕ್ಕೂ ಹೆಚ್ಚು ನುರಿತ  ಭಾರತೀಯ ಐಟಿ ವೃತ್ತಿಪರರಿಗೆ ಪ್ರಯೋಜನವಾಗಲಿದೆ.
ಗ್ರೀನ್ ಕಾರ್ಡ್ ಹೊಂದಿದ ವ್ಯಕ್ತಿ ಅಮೆರಿಕಾದಲ್ಲಿ ಶಾಶ್ವತವಾಗಿ ನೆಲೆಸುವ ಹಾಗೂ ವೃತ್ತಿ (ಕೆಲಸ) ಮಾಡುವ ಅವಕಾಶವನ್ನು ಪಡೆಯುತ್ತಾನೆ.
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದ ಈ ಮಸೂದೆ,ಕಾನೂನಾಗಿ ಮಾನ್ಯತೆ ಪಡೆಯುವಾಗ ಅಮೆರಿಕಾದಲ್ಲಿ ಶಾಶ್ವತ ಕೆಲಸ ಮತ್ತು  ವಾಸದ ಪರವಾನಗಿಬಯಸುವ ಭಾರತದಂತಹ ದೇಶಗಳ ಪ್ರತಿಭಾವಂತ ವೃತ್ತಿಪರರಿಗೆ ಅನುಕೂಲವಾಗಲಿದೆ.
ಫೈರ್ಮೆಸ್ ಆಫ್  ಹೈ-ಸ್ಕಿಲ್ಡ್ ಇಮಿಗ್ರಾಟ್ಸ್ ಕಾಯ್ದೆ 2019 ಅಥವಾ ಎಚ್‌ಆರ್ 1044  ಎಂಬ ಶೀರ್ಷಿಕೆಯ  ಮಸೂದೆಯನ್ನು  435 ಸದಸ್ಯರ ಸದನವು 365-65 ಮತಗಳ ಬಹುಮತದಿಂದ ಅಂಗೀಕರಿಸಿತು.
ಪ್ರಸ್ತುತ ವ್ಯವಸ್ಥೆಯ ಪ್ರಕಾರ, ಒಂದು ನಿರ್ದಿಷ್ಟ ವರ್ಷದಲ್ಲಿ ಅಮೆರಿಕಾ ನೀಡಬೇಕಾದ ಕುಟುಂಬ ಆಧಾರಿತ  ವಲಸೆಗಾರರ ​​ವೀಸಾಗಳ ಪೈಕಿ, ಒಂದು ದೇಶದ ಜನರಿಗೆಗರಿಷ್ಠ ಏಳು ಶೇಕಡಾವಷ್ಟನ್ನು ನೀಡಬಹುದಾಗಿದೆ.ಆದರೆ ಹೊಸ ಮಸೂದೆಯ ಅನುಸಾರ ಈ ಏಳು ಶೇಕಡಾ ಮಿತಿಯನ್ನು 15 ಪ್ರತಿಶತಕ್ಕೆ ಹೆಚ್ಚಿಸಲು ಅವಕಾಶವಿದೆ. ಅಂತೆಯೇ, ಉದ್ಯೋಗ ಆಧಾರಿತ ವಲಸೆಗಾರರ ​​ವೀಸಾಗಳ ಮೇಲಿನ ಳು ಪ್ರತಿಶತದಷ್ಟು ಮಿತಿಯನ್ನು  ತೆಗೆದುಹಾಕಲು ಸಹ ಇದು ಪ್ರಯತ್ನಿಸುತ್ತದೆ. ಹೆಚ್ಚುವರಿಯಾಗಿ, ಇದು ಚೀನಾದ ವ್ಯಕ್ತಿಗಳಿಗೆ ವೀಸಾಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಅಂಶವನ್ನೂ ತೆಗೆದುಹಾಕುತ್ತದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT