ವಿದೇಶ

ವಿಶ್ವ ಬ್ಯಾಂಕ್ ಎಂಡಿ, ಸಿಎಫ್ಒ ಆಗಿ ಭಾರತದ ಅಂಶುಲಾ ಕಾಂತ್ ನೇಮಕ

Lingaraj Badiger
ವಾಷಿಂಗ್ಟನ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಅಂಶುಲಾ ಕಾಂತ್ ಅವರು ವಿಶ್ವ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ(ಎಂಡಿ) ಹಾಗೂ ಮುಖ್ಯ ಹಣಕಾಸು ಅಧಿಕಾರಿ(ಸಿಎಫ್ಒ)ಯಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ವಿಶ್ವ ಬ್ಯಾಂಕ್ ನ ಉನ್ನತ ಹುದ್ದೆಗೇರಿದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ವಿಶ್ವ ಬ್ಯಾಂಕ್ ಗ್ರೂಪ್ ಎಂಡಿ ಹಾಗೂ ಸಿಎಫ್ಒ ಆಗಿ ಅಂಶುಲಾ ಕಾಂತ್ ಅವರು ನೇಮಕಗೊಂಡಿದ್ದಾರೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಫಾಸ್ ಅವರು ಶುಕ್ರವಾರ ಪ್ರಕಟಿಸಿದ್ದಾರೆ.
ಅಂಶುಲಾ ಕಾಂತ್ ಅವರನ್ನು ವಿಶ್ವ ಬ್ಯಾಂಕ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಿಎಫ್ಒ ಆಗಿ ನೇಮಕ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ. ಹಣಕಾಸು ಹಾಗೂ ಬ್ಯಾಂಕಿಂಗ್ ವ್ಯವಹಾರದಲ್ಲಿ ಅವರಿಗೆ 35 ವರ್ಷಗಳ ಅನುಭವ ಇದೆ ಎಂದು ಮಲ್ಫಾಸ್ ಅವರು ಹೇಳಿದ್ದಾರೆ.
SCROLL FOR NEXT