ವಿದೇಶ

ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ 32 ಜನ ಬಲಿ

Srinivas Rao BV
ಕಠ್ಮಂಡು: ಗುರುವಾರ ಸಂಜೆ ನೇಪಾಳದಲ್ಲಿ ಸುರಿದ ಭಾರಿ ಮಳೆ ಹಾಗೂ ಭೂ ಕುಸಿತದಿಂದ 32 ಜನ ಸಾವನ್ನಪ್ಪಿದ್ದು, ಹಲವು  ಮಂದಿ ತೀವ್ರ ಗಾಯಗೊಂಡಿದ್ದಾರೆ ಮಳೆಯಿಂದಾಗಿ ಸಂಭವಿಸಿದ ಪ್ರವಾಹದಿಂದಾಗಿ 17 ಜನ ಕಾಣೆಯಾಗಿರುವುದಾಗಿ ಗೃಹಸಚಿವಾಲಯ ಶನಿವಾರ ತಿಳಿಸಿದೆ.
ನಿರಂತರ ಸುರಿದ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ನೇಪಾಳದ 21 ಜಿಲ್ಲೆಗಳಿಗಲ್ಲಿ ತೀವ್ರ ಹಾನಿ ಸಂಭವಿಸಿದೆ.
ರಾಜಧಾನಿ ಕಠ್ಮಂಡುವಿನ ರಸ್ತೆಗಳೆಲ್ಲಾ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿವೆ. ಅಲ್ಲಿನ ರಕ್ಷಣಾ ತಂಡಗಳು  ಪ್ರವಾಹಕ್ಕೆ ಸಿಲುಕಿದ ಮನೆಗಳಲ್ಲಿರುವ ಜನರನ್ನು ರಬ್ಬರ್ ದೋಣಿಗಳ ಮುಖಾಂತರ ಸ್ಥಳಾಂತರಿಸುತ್ತಿರುವ ದೃಷ್ಯಾವಳಿ ಮಾಧ್ಯಮಗಳಿಂದ ತಿಳಿದುಬಂದಿದೆ.
ದಕ್ಷಿಣದ ತೆರೈ ಬಯಲು ಪ್ರದೇಶಗಳು ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಅಲ್ಲಿನ ಕುಟುಂಬಗಳು ಸೊಂಟದ ಮಟ್ಟದಲ್ಲಿರುವ ನೀರಿನಲ್ಲಿ ತಮ್ಮ ವಸ್ತುಗಳನ್ನು ತಲೆಯ ಮೇಲೆ ಹೊತ್ತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶನಿವಾರ ಮಧ್ಯಾಹ್ನದ ವೇಳೆಗೆ 831 ವ್ಯಕ್ತಿಗಳನ್ನು ಪ್ರವಾಹದ ಸ್ಥಳದಿಂದ ಸ್ಥಳಾಂತರಿಸಲಾಗಿದೆ ಎಂದು ನೇಪಾಳದ ಪೊಲೀಸ್ ಪ್ರಧಾನ ಕಚೇರಿ ತಿಳಿಸಿದೆ.
ದೇಶದ ವಿವಿಧ ಭಾಗಗಳಲ್ಲಿ ಒಟ್ಟಾರೆಯಾಗಿ 27,830 ಪೊಲೀಸ್ ಸಿಬ್ಬಂದಿಗಳು ರಕ್ಷಣಾ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಪ್ರಧಾನ ಕಚೇರಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಥಪಾ ತಿಳಿಸಿದರು.
ಈ ನಡುವೆ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಕಾರ್ಯಾಚರಣೆ ಆರಂಭಿಸಲು ಗೃಹ ವ್ಯವಹಾರ ಸಚಿವಾಲಯ ತಿಳಿಸಿದೆ. ಸಭೆಯಲ್ಲಿ ಗೃಹ ಸಚಿವ ರಾಮ್ ಬಹದ್ದೂರ್ ತಾಪಾ, ಸರ್ಕಾರಿ ಕಾರ್ಯದರ್ಶಿಗಳು ಮತ್ತು ಭದ್ರತಾ ಸಂಸ್ಥೆಯ ಮುಖ್ಯಸ್ಥರನ್ನು ಸ್ಥಳೀಯ ಸರ್ಕಾರಗಳ ಸಮನ್ವಯದೊಂದಿಗೆ ಬಿಡುಗಡೆ, ಪರಿಹಾರ ಮತ್ತು ಪುನರ್ವಸತಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಒತ್ತಾಯಿಸಿದರು ಎಂದು  ಗೃಹ ಸಚಿವರ ಸಹಾಯಕರೊಬ್ಬರು ತಿಳಿಸಿದರು.
SCROLL FOR NEXT