ವಿದೇಶ

ಮಧ್ಯಸ್ಥಿಕೆ ಅಲ್ಲ, ಸಹಾಯ ಮಾಡಲು ಸಿದ್ದವಿದೆ ಎಂದು ಹೇಳಿದ್ದು: ಅಮೆರಿಕಾ ಸ್ಪಷ್ಟನೆ

Sumana Upadhyaya
ವಾಷಿಂಗ್ಟನ್: ಕಾಶ್ಮೀರ ವಿವಾದವನ್ನು ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿದ ಕೆಲ ಸಮಯಗಳ ನಂತರ ಸ್ಪಷ್ಟನೆ ನೀಡಿರುವ ಅಮೆರಿಕಾದ ಹಂಗಾಮಿ ಸಹಾಯಕ ಕಾರ್ಯದರ್ಶಿ ಆಲಿಸ್ ವೆಲ್ಸ್, ಕಾಶ್ಮೀರ ವಿವಾದವನ್ನು ಭಾರತ ಮತ್ತು ಪಾಕಿಸ್ತಾನ ಕುಳಿತು ಬಗೆಹರಿಸುವುದನ್ನು ಅಮೆರಿಕಾ ಸ್ವಾಗತಿಸುತ್ತಿದ್ದು ಅದು ಸಹಾಯ ಮಾಡಲು ಸಿದ್ಧವಿದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಭಾಗದ ಹಂಗಾಮಿ ಸಹಾಯಕ ಕಾರ್ಯದರ್ಶಿ ವೆಲ್ಸ್, ಎರಡೂ ದೇಶಗಳಿಗೆ ಕಾಶ್ಮೀರ ದ್ವಿಪಕ್ಷೀಯ ಸಂಬಂಧದ ವಿಷಯವಾಗಿದ್ದು ಈ ವಿಷಯದ ಬಗ್ಗೆ ಭಾರತದ ಸ್ಥಿರ ನಿಲುವನ್ನು ಪ್ರತಿಧ್ವನಿಸುತ್ತದೆ ಎಂದು ಹೇಳಿದ್ದಾರೆ.
ಅಮೆರಿಕಾ ಎರಡೂ ದೇಶಗಳ ನಡುವಿನ ವಿವಾದ ಬಗೆಹರಿಸಲು ಸಹಾಯ ಮಾಡಲು ಸಿದ್ಧವಿದೆ ಎಂದು ಹೇಳಿದ್ದಷ್ಟೆ ಹೊರತು ಮಧ್ಯಸ್ಥಿಕೆ ವಹಿಸುತ್ತದೆ ಎಂದು ಅಲ್ಲ ಎಂದು ಸ್ಪಷ್ಟನೆ ನೀಡಿದೆ. 
SCROLL FOR NEXT