ವಿದೇಶ

ಕ್ಯಾಲಿಫೋರ್ನಿಯಾ ಆಹಾರ ಮೇಳದಲ್ಲಿ ಗುಂಡಿನ ದಾಳಿ: ಮೂವರು ಸಾವು, 12 ಮಂದಿಗೆ ಗಾಯ

Raghavendra Adiga
ಗಿಲ್ರಾಯ್: ಉತ್ತರ ಕ್ಯಾಲಿಫೋರ್ನಿಯಾದ ಆಹಾರ ಮೇಳ ಒಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿ 12 ಮಂದಿ ಗಾಯಗೊಂಡಿದ್ದಾರೆ.
ಗಿಲ್ರಾಯ್ ಕೌನ್ಸಿಲ್ ಮನ್  ಡಿಯೋನ್ ಬ್ರಾಕೊ ಶೂಟಿಂಗ್ ನಡೆಸಿದವರ ಪ್ರಾಥಮಿಕ ಚಹರೆ ತಿಳಿದಿದೆ ಎಂದು ಹೇಳಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದ ಆಗ್ನೇಯಕ್ಕೆ 80 ಮೈಲಿ (176 ಕಿಲೋಮೀಟರ್) ದೂರದಲ್ಲಿರುವ 50,000 ಸಿಟಿ ಆಫ್ ಫೆಸ್ಟಿವಲ್ ನಲ್ಲಿ ಈ ಶೂಟಿಂಗ್ ಘಟನೆ ವರದಿಯಾಗಿದ್ದು ಪ್ರತ್ಯಕ್ಷ ದರ್ಶಿಗಳು ಗೊಂದಲ ಮತ್ತು ಭೀತಿಯಿಂದ ಕೂಡಿದ್ದಾರೆ. ಗಿಲ್ರಾಯ್ಉತ್ಸವದಲ್ಲಿ ನಡೆದ ಶೂಟಿಂಗ್ ನಲ್ಲಿ ಗಾಯಗೊಂಡ ಇಬ್ಬರು ವ್ಯಕ್ತಿಗಳು ಸ್ಟ್ಯಾನ್‌ಫೋರ್ಡ್ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು ಆ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿಯಬೇಕಿದೆ.ಸಾಂತಾ ಕ್ಲಾರಾ ವ್ಯಾಲಿ ವೈದ್ಯಕೀಯ ಕೇಂದ್ರದಲ್ಲಿ ಐವರು ಸಂತ್ರಸ್ಥರು ಚಿಕಿತ್ಸೆಗೆ ದಾಖಲಾಗಿದ್ದಾರೆ.
ವಾರ್ಷಿಕವಾಗಿ ನಡೆಯುವ ಗಾರ್ಲಿಕ್ ಫೆಸ್ಟಿವಲ್ ಅಂಗವಾಗಿ ಆಹಾರ, ಅಡುಗೆ ಸ್ಪರ್ಧೆಗಳು ಮತ್ತು ಸಂಗೀತ ರಸಮಂಜರಿ ಸೇರಿ ಅನೇಕ ಕಾರ್ಯಕ್ರಮಗಳು ಕಳೆದ ಮುರು ದಿನಗಳಿಂದ ಅಲ್ಲಿ ನಡೆಯುತ್ತಿದ್ದವು. ಘಟನೆ ನಡೆದ ಭಾನುವಾರ ಉತ್ಸವದ ಕಡೆಯ ದಿನವಾಗಿತ್ತು. 
SCROLL FOR NEXT