ವಿದೇಶ

ಮಾಲ್ಡೀವ್ಸ್ ಅಧ್ಯಕ್ಷರಿಗೆ ಟೀಂ ಇಂಡಿಯಾ ಆಟಗಾರರು ಸಹಿ ಮಾಡಿದ ಬ್ಯಾಟ್ ಗಿಫ್ಟ್ ನೀಡಿದ ಪ್ರಧಾನಿ

Lingaraj Badiger
ಮಾಲೆ: ಸಾರ್ವತ್ರಿಕ ಚುನಾವಣೆಯ ಅಭೂತಪೂರ್ವ ಗೆಲುವಿನ ಬಳಿಕ ಮೊಟ್ಟ ಮೊದಲ ಬಾರಿಗೆ ಸಾಗರೋತ್ತರ ದೇಶಗಳ ಪ್ರವಾಸವಾಗಿ ಮಾಲ್ಡೀವ್ಸ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಅವರಿಗೆ ಕ್ರಿಕೆಟ್ ಬ್ಯಾಟ್ ವೊಂದನ್ನು ಕಾಣಿಕೆಯಾಗಿ ನೀಡಿದ್ದಾರೆ.
“ಕ್ರಿಕೆಟ್ ಕ್ರೀಡೆಯ ಪ್ರೇಮಿಯಾದ ನನ್ನ ಗೆಳೆಯ, ಮಾಲ್ಡೀವ್ಸ್ ಅಧ್ಯಕ್ಷ ಸೋಲಿಹ್ ಅವರಿಗೆ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿರುವೆ. ಅದರ ಮೇಲೆ 2019ರ ವಿಶ್ವಕಪ್ ಕ್ರಿಕೆಟ್ ನಲ್ಲಿ ಆಡುತ್ತಿರುವ ಭಾರತೀಯ ತಂಡದ ಆಟಗಾರರ ಸಹಿಯಿದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಉಭಯ ಮುಖಂಡರೂ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ, ವಿದೇಶಿ ಗಣ್ಯರಿಗೆ ಕೊಡಮಾಡಲಾಗುವ ‘ನಿಷಾನ್ ಇಝುದ್ದೀನ್’ ಪ್ರಶಸ್ತಿಯನ್ನು ಮೋದಿಯವರಿಗೆ ನೀಡುತ್ತಿರುವುದಾಗಿ ಅಧ್ಯಕ್ಷ ಸೋಲಿಹ್ ಪ್ರಕಟಿಸಿದ್ದರು. ಅದರಂತೆ ಪ್ರಧಾನಿ ಮೋದಿ ಅವರಿಗೆ ಮಾಲ್ಡೀವ್ಸ್ ಅಧ್ಯಕ್ಷಕರು ಪ್ರಧಾನಿ ಮೋದಿ ಅವರಿಗೆ ನಿಷಾನ್ ಇಝುದ್ದೀನ್ ನೀಡಿ ಗೌರವಿಸಿದ್ದಾರೆ.
ಇದಕ್ಕೂ ಮುನ್ನ ಮಾಲೆಯಲ್ಲಿ ಮೋದಿ ಅವರಿಗೆ ಭಾರತೀಯ ಸಮುದಾಯ ಅಭೂತಪೂರ್ವ ಸ್ವಾಗತ ಕೋರಿತು.
ಎರಡೂ ದೇಶಗಳ ನಡುವಿನ ವಿವಿಧ ವಲಯಗಳ ಸಹಕಾರ ಬಲವರ್ಧನೆ ನಿಟ್ಟಿನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಿತು. ಇದೇ ಸಂದರ್ಭದಲ್ಲಿ ಹಲವು ಪ್ರಮುಖ ಒಪ್ಪಂದಗಳಿಗೆ ಸಹಿಬೀಳುವ ನಿರೀಕ್ಷೆ ಇದೆ.
SCROLL FOR NEXT