ವಿದೇಶ

ಕಿರ್ಗಿಸ್ಥಾನದಲ್ಲಿ ಎಸ್.ಸಿ.ಓ ಶೃಂಗಸಭೆ, ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಜಿಂಗ್ ಪಿನ್ ಭೇಟಿ

Raghavendra Adiga
ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಈ ವಾರ ಬಿಷ್ಕೇಕ್ ನಲ್ಲಿ ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. 
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೃಹತ್ ವಿಜಯ ಸಾಧಿಸಿ ಎರಡನೇ ಬಾರಿಗೆ ಮೋದಿ ಭಾರತದ ಪ್ರಧಾನಿಯಾದ ನಂತರ ಇದು ಇಬ್ಬರೂ ನಾಯಕರ ಮೊದಲ ಭೇಟಿಯಾಗಲಿದೆ.
ಜೂನ್ 12 ರಿಂದ 16 ರವರೆಗೆ ಕಿರ್ಗಿಸ್ತಾನ್ ಮತ್ತು ತಜಾಕಿಸ್ಥಾಕ್ಕೆ ಕ್ಸಿ ಭೇಟಿ ನೀಡಲಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ತಿಳಿಸಿದ್ದಾರೆ. ಎಸ್ಸಿಒ ಶೃಂಗಸಭೆ ಕಿರ್ಗಿಸ್ತಾನ್ ಬಿಶ್ಕೆಕ್ ನಲ್ಲಿ ಜೂನ್ 13-14 ರಂದು ನಡೆಯಲಿದೆ.
ಎಸ್ಸಿಒ ಚೀನಾನೇತೃತ್ವದ ಎಂಟು ಸದಸ್ಯರ ಆರ್ಥಿಕ ಮತ್ತು ಭದ್ರತಾ ಸಂಘಟನೆಯಾಗಿದ್ದು ಭಾರತ ಮತ್ತು ಪಾಕಿಸ್ತಾನ 2017ರಿಂದ ಈ ಸಂಘಟನೆಯ ಸದಸ್ಯ ರಾಷ್ಟ್ರಗಳಾಗಿದೆ.
ಚೀನಾದ ಭಾರತೀಯ ರಾಯಭಾರಿಯಾಗಿರುವ ವಿಕ್ರಮ್ ಮಿಸ್ರಿ  ಸಹ ಈ ಮ್ಮುನ್ನ ಇಬ್ಬರು ನಾಯಕರು ಎಸ್ಸಿಒ ಶೃಂಗಸಭೆಯಲ್ಲಿ ಪರಸ್ಪರ ಭೇಟಿ ಆಗಲಿದ್ದಾರೆ ಎಂದು ಹೇಳಿದ್ದರು.
SCROLL FOR NEXT