ವಿದೇಶ

ಇಮ್ರಾನ್ ಖಾನ್ ಸಮ್ಮುಖದಲ್ಲೇ ಪಾಕ್ ವಿರುದ್ಧ ಮೋದಿ ವಾಗ್ದಾಳಿ, ಶೃಂಗಸಭೆ ಸಮಾರೋಪದಲ್ಲಿ ಹಸ್ತಲಾಘವ!

Srinivas Rao BV
ಬಿಷ್ಕೇಕ್: ಎಸ್ ಸಿಒ ಶೃಂಗಸಭೆಯ ಎರಡನೇ ದಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್- ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಕೈಕುಲುಕಿದ್ದಾರೆ. 
ಮೊದಲನೇ ದಿನ ಕಿರ್ಜಕಿಸ್ತಾನದ ಅಧ್ಯಕ್ಷ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಪ್ರಧಾನಿಗೆ ಮುಖಾಮುಖಿಯಾದರೂ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದರು.
ಜಾಗತಿಕ ಸಮಾವೇಶದಲ್ಲಿ ಇಬ್ಬರು ಪ್ರಧಾನಿಗಳು ಸೌಜನ್ಯಕ್ಕಾಗಿ ಪರಸ್ಪರ ಹಸ್ತಲಾಘವ ನೀಡುವುದು ಸಾಮಾನ್ಯವಾಗಿದ್ದು, ಇದಕ್ಕಷ್ಟೇ ಮೋದಿ-ಇಮ್ರಾನ್ ಖಾನ್ ಭೇಟಿ ಸೀಮಿತಗೊಂಡಿತ್ತು.
ಇಮ್ರಾನ್ ಖಾನ್ ಗೆ ಹಸ್ತಲಾಘವ ನೀಡುವುದಕ್ಕೂ ಮುನ್ನ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಇಮ್ರಾನ್ ಖಾನ್ ಸಮ್ಮುಖದಲ್ಲೇ ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದರು. " ಭಯೋತ್ಪಾದನೆಗೆ ಬೆಂಬಲ ಹಾಗೂ ಆರ್ಥಿಕ ನೆರವು ನೀಡುವ ರಾಷ್ಟ್ರಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. 
SCROLL FOR NEXT