ವಿದೇಶ

ಅಮೆರಿಕ-ಇರಾನ್ ಪ್ರಕ್ಷುಬ್ಧ: ಇರಾನ್ ವಾಯುಪ್ರದೇಶ ಬಳಕೆ ಮಾಡುವುದರ ಬಗ್ಗೆ ಭಾರತ ಹೇಳಿದ್ದಿಷ್ಟು!

Srinivas Rao BV
ನವದೆಹಲಿ: ಅಮೆರಿಕ-ಇರಾನ್ ನಡುವೆ ರಾಜಕೀಯ-ಭೌಗೋಳಿಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಇರಾನ್ ವಾಯುಪ್ರದೇಶ ಬಳಕೆ ಮಾಡುವ ಬಗ್ಗೆ ಡಿಜಿಸಿಎ ಹೇಳಿಕೆ ನೀಡಿದೆ.
ಇರಾನ್ ನ ವಾಯುಮಾರ್ಗವನ್ನು ಬಳಸಲಾಗುವುದಿಲ್ಲ, ಬೇರೆ ಸೂಕ್ತವಾದ ಬದಲಿ ಮಾರ್ಗವನ್ನು ಬಳಕೆ ಮಾಡಲಾಗುವುದು ಎಂದು ಭಾರತದ ವಿಮಾನ ನಿಯಂತ್ರಕ ಡಿಜಿಸಿಎ ಹೇಳಿದೆ. 
ಈ ನಡುವೆ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ಅಮೆರಿಕದ ನೋಂದಾಯಿತ ಏರ್ ಕ್ರಾಫ್ಟ್ ಗಳನ್ನು ತೆಹ್ರಾನ್ ಪ್ರದೇಶಗಳಲ್ಲಿ ಹಾರಾಟ ಮಾಡದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ ಇರಾನ್ ಅಮೆರಿಕದ ಸೇನಾ ಡ್ರೋಣ್ ನ್ನು ಹೊಡೆದುರುಳಿಸಿತ್ತು.
SCROLL FOR NEXT