ವಿದೇಶ

ಜಿ20 ಶೃಂಗಸಭೆ; ಇಂಡೋನೇಷಿಯಾ ಅಧ್ಯಕ್ಷ ಜೊಕೊ ವಿಡೊಡೊ ಭೇಟಿ ಮಾಡಿದ ಪ್ರಧಾನಿ ಮೋದಿ

Sumana Upadhyaya
ಒಸಾಕಾ(ಜಪಾನ್): 14ನೇ ಜಿ20 ಶೃಂಗಸಭೆಯ ಕೊನೆಯ ದಿನವಾದ ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂಡೊನೇಷಿಯಾ ಅಧ್ಯಕ್ಷ ಜೊಕೊ ವಿಡೊಡೊ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಕಳೆದ ಏಪ್ರಿಲ್ 17ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಅವಧಿಗೆ ಇಂಡೋನೇಷಿಯಾ ಅಧ್ಯಕ್ಷರಾಗಿ ಆಯ್ಕೆಯಾದ ಜೊಕೊ ವಿಡೊಡೊ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.
ಜಿ20 ಶೃಂಗಸಭೆಯಲ್ಲಿ ಜೊಕೊ ವಿಡೊಡೊ ಜೊತೆಗೆ ಪ್ರಧಾನಿ ಮೋದಿ ಅತ್ಯಂತ ರಚನಾತ್ಮಕ ಮಾತುಕತೆ ನಡೆಸಿದ್ದಾರೆ. ವ್ಯಾಪಾರ, ಹೂಡಿಕೆ, ರಕ್ಷಣೆ, ಬಂದರು, ಅಂತರಿಕ್ಷ ಮತ್ತು ಇಂಡೊ-ಫೆಸಿಫಿಕ್ ಸಂಬಂಧಪಟ್ಟ ದೃಷ್ಟಿಕೋನಗಳ ಕುರಿತು ತಮ್ಮ ಅಭಿಪ್ರಾಯ, ಸಲಹೆಗಳನ್ನು ಇಬ್ಬರೂ ನಾಯಕರು ಹಂಚಿಕೊಂಡರು ಎಂದರು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜೊಕೊ ವಿಡೊಡೊ ಸಹ ಪ್ರಧಾನಿ ಮೋದಿಗೆ ಎರಡನೇ ಸಲ ಪ್ರಧಾನಿಯಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. 
ಈ ಮಧ್ಯೆ ಪ್ರಧಾನಿ ಮೋದಿ ಶೃಂಗಸಭೆಯ ಸಂದರ್ಭದಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನರೊ ಅವರನ್ನು ಸಹ ಭೇಟಿ ಮಾಡಿದ್ದಾರೆ. 
SCROLL FOR NEXT