ನವದೆಹಲಿ: ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಸಮಾವೇಶದಲ್ಲಿ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗೌರವ ಅತಿಥಿಯಾಗಿ ಭಾಗಿಯಾಗುತ್ತಿದ್ದು ಒಂದು ವೇಳೆ ಭಾರತ ಭಾಗಿಯಾಗಿದ್ದೇ ಆದರೆ ನಾವು ಸಮಾವೇಶವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಎಚ್ಚರಿಕೆ ನೀಡಿದೆ.
1969ರಲ್ಲಿ ಸ್ಥಾಪನೆಯಾಗಿದ್ದ ಒಐಸಿಯಲ್ಲಿ 57 ಸದಸ್ಯ ರಾಷ್ಟ್ರಗಳಿದ್ದು ಇದರಲ್ಲಿ 40 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿವೆ. ಮಾರ್ಚ್ 1 ಮತ್ತು 2ರಂದು ಅಬುದಾಬಿಯಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ಗೌರವ ಅತಿಥಿಯಾಗಿ ಪಾಲ್ಗೊಳ್ಳುವಂತೆ ಸುಷ್ಮಾ ಸ್ವರಾಜ್ ಅವರಿಗೆ ಆಹ್ವಾನ ನೀಡಲಾಗಿತ್ತು.
ಒಐಸಿ ಅಥವಾ ಇಸ್ಲಾಮಿಕ್ ಸದಸ್ಯ ರಾಷ್ಟ್ರಗಳ ಬಗ್ಗೆ ನಮಗೇನೂ ಅಸಮಾಧಾನವಿಲ್ಲ. ಆದರೆ ಒಐಸಿ ಸಭೆಯಲ್ಲಿ ಭಾರತದ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಪಾಲ್ಗೊಳ್ಳುವುದಕ್ಕೆ ನಮ್ಮ ಆಕ್ಷೇಪವಿದೆ. ಅವರು ಸಭೆಯಲ್ಲಿ ಪಾಲ್ಗೊಂಡರೆ ನಾವು ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics