ವಿದೇಶ

ಭಾರತ ಅತ್ಯಂತ ದುಬಾರಿ ತೆರಿಗೆ ದೇಶ; ಅದಕ್ಕೆ ಪ್ರತಿಯಾಗಿ ತೆರಿಗೆ ವಿಧಿಸುತ್ತೇವೆ; ಡೊನಾಲ್ಡ್ ಟ್ರಂಪ್

Sumana Upadhyaya
ವಾಷಿಂಗ್ಟನ್: ಅಮೆರಿಕಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಧಿಕ ತೆರಿಗೆ ವಿಧಿಸುತ್ತಿರುವ ಭಾರತಕ್ಕೆ ಪ್ರತಿಯಾಗಿ ಅಮೆರಿಕಾ ಕೂಡ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಧಿಕ ಪ್ರತಿ ತೆರಿಗೆ ವಿಧಿಸುವುದಾಗಿ ಅಮೆರಿಕಾ ಬೆದರಿಕೆ ಹಾಕಿದೆ.
ಮೇರಿಲ್ಯಾಂಡ್ ನಲ್ಲಿ ನಡೆದ 4 ದಿನಗಳ ಸಂರಕ್ಷಣಾ ರಾಜಕೀಯ ಕಾರ್ಯ ಸಮ್ಮೇಳನ(ಸಿಪಿಎಸಿ)ದ ಕೊನೆಯ ದಿನ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಅತ್ಯಂತ ದುಬಾರಿ ತೆರಿಗೆ ದೇಶವಾಗಿದೆ. ನಾವು ಬೈಕೊಂದನ್ನು ಭಾರತಕ್ಕೆ ಕಳುಹಿಸಿದರೆ ಅವರು ಶೇಕಡಾ 100ರಷ್ಟು ತೆರಿಗೆ ವಿಧಿಸುತ್ತಾರೆ. ಅದೇ ಭಾರತ ಇಲ್ಲಿಗೆ ಮೋಟಾರ್ ಸೈಕಲ್ ವೊಂದನ್ನು ಕಳುಹಿಸಿದರೆ ನಾವು ಯಾವುದೇ ತೆರಿಗೆ ಹೇರುವುದಿಲ್ಲ. ಇನ್ನು ಮುಂದೆ ಭಾರತದ ಅಧಿಕ ತೆರಿಗೆಗೆ ಪ್ರತಿಯಾಗಿ ನಾವು ಕೂಡ ಬದಲಿ ತೆರಿಗೆ ವಿಧಿಸಬೇಕು ಎಂದು ಹೇಳಿದರು.
ಬದಲಿ ತೆರಿಗೆ(RECIPROCAL TAX) ತೆರಿಗೆಯ ಒಂದು ರೂಪವಾಗಿದ್ದು, ಅಮೆರಿಕಾದಿಂದ ರಫ್ತು ಆಗುವ ವಸ್ತುಗಳಿಗೆ ವಿಧಿಸುವ ತೆರಿಗೆಗೆ ಪ್ರತಿಯಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ವಿಧಿಸುವ ತೆರಿಗೆ ದರವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ದೇಶದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ವಿದೇಶಿ ಹೂಡಿಕೆ ಮಾಡುವಂತೆ ಕರೆ ಕೊಟ್ಟಿದ್ದರು, ಭಾರತವನ್ನು ಉತ್ಪಾದನೆಯ ಕೇಂದ್ರವನ್ನಾಗಿ ಮಾರ್ಪಡಿಸಿ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತಾಯಿಸಿದ್ದರು.
SCROLL FOR NEXT