ವಿದೇಶ

ಅಮೆರಿಕದ ಶೂನ್ಯ ತೆರಿಗೆ ನೀತಿ ವಾಪಸ್ ಸಾಧ್ಯತೆದೆ: ಹೀಗಿದೆ ಭಾರತದ ಪ್ರತಿಕ್ರಿಯೆ

Srinivas Rao BV
ನವದೆಹಲಿ: ಅಮೆರಿಕದ ಶೂನ್ಯ ತೆರಿಗೆ ನೀತಿ ಅಥವಾ ಆದ್ಯತೆಯ ವ್ಯಾಪಾರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆಯ ಕುರಿತು ಭಾರತ ಪ್ರತಿಕ್ರಿಯೆ ನೀದಿದೆ. 
ವಾಣಿಜ್ಯ ಕಾರ್ಯದರ್ಶಿ ಅನೂಪ್ ವಾಧ್ವಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಭಾರತ ಜಾಗೃತವಾಗಿರಬೇಕು ಎಂದು ಹೇಳಿದ್ದಾರೆ.  ಅಮೆರಿಕಾದೊಂದಿಗೆ ನಮಗೆ ಸುದೀರ್ಘವಾದ ವ್ಯಾಪಾರ ಸಂಬಂಧವಿದೆ. ವ್ಯಾಪಾರ ವಿಭಾಗದಲ್ಲಿನ ಎಲ್ಲಾ ವಿಷಯಗಳೂ ಸಹ ಚರ್ಚೆಗೆ ಮುಕ್ತವಾಗಿದೆ ವೈದ್ಯಕೀಯ ಸಾಧನಗಳ ಲಭ್ಯತೆ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಜಿಎಸ್ ಪಿ ಅಥವಾ ಆದ್ಯತೆಯ ವ್ಯಾಪಾರ ಪಟ್ಟಿಯ ಲಾಭದ ಆರ್ಥಿಕ ಮೌಲ್ಯಗಳು ಮಿತವಾಗಿದೆ ಎಂದು ಅನೂಪ್ ವಾಧ್ವಾನ್ ಹೇಳಿದ್ದಾರೆ. 
ಸಾರ್ವಜನಿಕ ಕಲ್ಯಾಣದ ವಿಷಯದಲ್ಲಿ ರಾಜೀ ಮಾಡಿಕೊಳ್ಳದೇ ವೈದ್ಯಕೀಯ ಸಾಧನಗಳ ಕೈಗೆಟುಕುವ ದರಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದೆವೆ ಎಂದು ಅನೂಪ್ ತಿಳಿಸಿದ್ದಾರೆ. 60 ದಿನಗಳಲ್ಲಿ ಜಿಎಸ್ ಪಿ ಸ್ಥಿತಿ ನಿರ್ಧಾರವಾಗಲಿದೆ, ಅಮೆರಿಕದೊಂದಿಗೆ ನಮ್ಮ ಬಾಂಧವ್ಯವೂ ಸಹ ಉತ್ತಮವಾಗಿಯೇ ಇದೆ. ಇದರಿಂದಾಗಿ ಅಮೆರಿಕದೊಂದಿಗೆ ಇರುವ ನಮ್ಮ 5.6 ಬಿಲಿಯನ್ ಡಾಲರ್ ರಫ್ತಿನ ಮೇಲೆ ನಮಗೆ ಯಾವುದೇ ಮಹತ್ವದ ಪರಿಣಾಮವೂ ಆಗುವುದಿಲ್ಲ ಎಂದು ಭಾರತದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
SCROLL FOR NEXT