ವಿದೇಶ

ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡ್ಬೇಕು! ಮಾರ್ಕಂಡೇಯ ಕಾಟ್ಜು ಹೀಗೆ ಹೇಳಿದ್ದೇಕೆ?

Vishwanath S
ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರಿಸುವ ಹೇಳಿಕೆ ನೀಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇದರೊಂದಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಯತ್ನಿಸಿದ್ದು ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ಎಂದು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಮಾರ್ಕಂಡೇಯ ಕಾಟ್ಜು ಹೇಳಿರುವುದಾಗಿ ಪಾಕ್ ಮಾಧ್ಯಮ ವರದಿ ಮಾಡಿದೆ.
ಮಾರ್ಕಂಡೇಯ ಕಾಟ್ಜು ಅವರು ಟ್ವೀಟ್ ಮಾಡಿದ್ದು ಅದರಲ್ಲಿ ಪಾಕ್ ಸಂಸತ್ ನಲ್ಲಿ ಇಮ್ರಾನ್ ಖಾನ್ ಅವರ ಭಾಷಣವು ಪ್ರೌಢತೆ, ಸಮತೋಲಿನ ಮತ್ತು ಸಂಪೂರ್ಣ ಬುದ್ಧಿವಂತಿಕೆಯಿಂದ ಕೂಡಿತ್ತು. ಎರಡು ದೇಶಗಳ ನಡುವೆ ಯುದ್ಧ ಯಾವುದಕ್ಕೂ ಪರಿಹಾರವಲ್ಲ ಎಂಬುದನ್ನು ಶಾಂತವಾಗಿ ವಿವರಿಸಿದ್ದರು. ಅವರ ಈ ಮಾತು ಇಡೀ ಜಗತ್ತಿಗೆ ಅನ್ವಯಿಸುತ್ತದೆ. ಅವರು ನೊಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಟ್ವೀಟಿಸಿದ್ದರು.
ಇದೇ ಟ್ವೀಟ್ ಅನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ಮಾಧ್ಯಮ ಕಾಟ್ಜು ಅವರನ್ನು ಮಾತನಾಡಿ ಅಭಿಪ್ರಾಯವನ್ನು ಕೇಳಿದ್ದು ಈ ವೇಳೆ ಸಹ ಕಾಟ್ಜು ಅವರು ಇಮ್ರಾನ್ ಖಾನ್ ರನ್ನು ಹೊಗಳಿದ್ದಾರೆ. 
SCROLL FOR NEXT