ವಿದೇಶ

ಬ್ರಿಟನ್, ಜರ್ಮನಿ, ಫ್ರಾನ್ಸ್ ಮತ್ತಿತರ ರಾಷ್ಟ್ರಗಳಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಿಗೆ ನಿಷೇಧ

Nagaraja AB

ಲಂಡನ್ : ಐದು ತಿಂಗಳ ಅವಧಿಯಲ್ಲಿ ಸಂಭವಿಸಿದ ಎರಡು ಭೀಕರ ವಿಮಾನ ಅಪಘಾತ ಘಟನೆಗಳಿಂದ  ಎಲ್ಲೆಡೆ ಬೋಯಿಂಗ್ 737 ಮ್ಯಾಕ್ಸ್  ವಿಮಾನಗಳ ಬಗ್ಗೆ ಆತಂಕ ಹೆಚ್ಚಾಗಿದ್ದು, ಬ್ರಿಟನ್, ಜರ್ಮನಿ, ಫ್ರಾನ್ಸ್ ಮತ್ತಿತರ ರಾಷ್ಟ್ರಗಳಲ್ಲಿ ಈ ವಿಮಾನಗಳನ್ನು ನಿಷೇಧಿಸಲಾಗಿದೆ.

ಭಾನುವಾರ  ಹೊಸ ಇಥಿಯೋಪಿಯನ್ ಏರ್ ಲೈನ್ಸ್ 737 ಮ್ಯಾಕ್ಸ್ ವಿಮಾನ ಅಪಘಾತಗೊಂಡು  ಎಲ್ಲಾ 157 ಪ್ರಯಾಣಿಕರು ಮೃತಪಟ್ಟಿದ್ದರು.  ಕಳೆದ ಅಕ್ಟೋಬರ್ ತಿಂಗಳಲ್ಲಿ ಇಂಡೋನೇಷ್ಯಾದಲ್ಲಿ ಇದೇ ಮಾದರಿಯ ವಿಮಾನ ಅಪಘಾತಗೊಂಡು 189 ಜನರು ಸಾವನ್ನಪ್ಪಿದ್ದರು.

ಅಮೆರಿಕಾದ  ನಿಯಂತ್ರಕರು ಬೋಯಿಂಗ್  ಮಾದರಿಗೆ ತುರ್ತು ಸುಧಾರಣೆ ಮಾಡಲು  ಆದೇಶ ನೀಡಿದ್ದಾರೆ. ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಆದರೆ, ಇದು ಬ್ರಿಟನ್, ಜರ್ಮನಿ, ಫ್ರಾನ್ಸ್, ಸಿಂಗಾಪುರ, ಆಸ್ಟ್ರೇಲಿಯಾ, ಮಲೇಷ್ಯಾ, ಮತ್ತು ಒಮನ್ ರಾಷ್ಟ್ರಗಳಿಗೆ ಧೈರ್ಯ ತುಂಬಿಲ್ಲ.ಆದಕಾರಣ ಎಲ್ಲಾ 737 ಮ್ಯಾಕ್ಸ್ ವಿಮಾನಗಳನ್ನು ನಿಷೇಧಿಸಿವೆ.
SCROLL FOR NEXT