ವಿದೇಶ

ಮಸೂದ್ ಅಜರ್ ನಿಷೇಧಕ್ಕೆ ಅಡ್ಡಿ: ಚೀನಾ ವಿರುದ್ಧವೇ ತಿರುಗಿಬಿದ್ದ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು!

Srinivas Rao BV
ನ್ಯೂಯಾರ್ಕ್: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಗೆ ಜಾಗತಿಕವಾಗಿ ನಿಷೇಧ ಹೇರುವುದಕ್ಕೆ ನಿರಂತರವಾಗಿ ಅಡ್ಡಿಯಾಗುತ್ತಿರುವ ಚೀನಾ ವಿರುದ್ಧ ಈಗ ವಿಶ್ವಸಂಸ್ಥೆ ರಾಷ್ಟ್ರಗಳೇ ಈಗ ತಿರುಗಿಬಿದ್ದಿವೆ. 
ಚೀನಾ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾಗೆ ಎಚ್ಚರಿಕೆ ನೀಡಿದ್ದು, ಚೀನಾ ಇದೇ ಹಾದಿಯಲ್ಲಿ ಮುಂದುವರೆದರೆ ನಾವು ಬೇರೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಹೇಳಿದೆ. 
ಇದೇ ವೇಳೆ ಪುಲ್ವಾಮ ದಾಳಿಯ ಬೆನ್ನಲ್ಲೇ ಮಸೂದ್ ಅಜರ್ ನ ಜಾಗತಿಕ ಮಟ್ಟದಲ್ಲಿ ಉಗ್ರನೆಂದು ಘೋಷಿಸಿ ನಿಷೇಧ ವಿಧಿಸುವುದಕ್ಕೆ ಅಮೆರಿಕ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳು ಭಾರತಕ್ಕೆ ಬೆಂಬಲ ನೀಡಿವೆ. ಆದರೆ ಚೀನಾ ಮಾತ್ರ ಎಂದಿನಂತೆ ತನ್ನ ಹಠಮಾರಿ ಧೋರಣೆ ಮುಂದುವರೆಸಿದ್ದು, ಪರಮಾಪ್ತ ಮಿತ್ರ ಪಾಕಿಸ್ತಾನದ ಉಗ್ರ ಮಸೂದ್ ಅಜರ್ ಗೆ ಜಾಗತಿಕ ಮಟ್ಟದಲ್ಲಿ ನಿಷೇಧ ವಿಧಿಸುವುದಕ್ಕೆ ಅಡ್ಡಗಾಲು ಹಾಕಿದೆ. ಪುಲ್ವಾಮ ದಾಳಿಯಲ್ಲಿ ಜೈಶ್-ಉಗ್ರ ಸಂಘಟನೆಯ ಮುಖ್ಯಸ್ಥನ ಕೈವಾಡ ಸ್ಪಷ್ಟವಾಗಿದ್ದು, ಮಸೂದ್ ಅಜರ್ ಗೆ ನಿಷೇಧ ವಿಧಿಸುವ ವಿಚಾರವನ್ನು ಬೆಂಬಲಿಸುವುದಕ್ಕೆ ಚೀನಾಗೆ ಒತ್ತಡ ಹೆಚ್ಚಿತ್ತು. ಆದರೂ ಚೀನಾ ತನ್ನ ಎಂದಿನ ನಡೆಗೆ ಬದ್ಧವಾಗಿದೆ.
SCROLL FOR NEXT