ವಿದೇಶ

ನ್ಯೂಜಿಲ್ಯಾಂಡ್ ಬಳಿಕ ನೆದರ್ಲ್ಯಾಂಡ್ ನಲ್ಲಿ ಗುಂಡಿನ ದಾಳಿ: ಒಬ್ಬ ಸಾವು ಹಲವರಿಗೆ ಗಾಯ

Raghavendra Adiga
ದಿ ಹೇಗ್: ನೆದರ್ಲ್ಯಾಂಡ್ ನ ಡಚ್ ಸಿಟಿ ಆಫ್ ಉಟ್ರೇಶಿಟ್ ಎಂಬಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಸತ್ತು  ಹಲವ್ರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯ ಮಾದ್ಯಮಗಳಲ್ಲಿ ಇದೊಂದು ಭಯೋತ್ಪಾದನಾ ಕೃತ್ಯವಿರಬಹುದೆಂದು ಶಂಕೆ ವ್ಯಕ್ತವಾಗಿದ್ದು ಪೋಲೀಸರು ವ್ಯಾಪಕ ತನಿಖೆ ಕೈಗೊಂಡಿದ್ದಾರೆ.
"ಉಟ್ರೇಶಿಟ್  ನ 24 ಅಕ್ಟೋಬರ್ ಪ್ಲೇನ್ ಎಂಬಲ್ಲಿ ಗುಂಡಿನ ದಾಳಿ ನಡೆಇದ್ದು ಹಲವರು ಗಾಯಗೊಂಡಿದ್ದಾರೆ. ಸುಧ್ಯ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾರ್ವಜನಿಕ ಸಂಚಾರ ನಿರ್ಬಂಧಿಸಿದ್ದು ನಾವು  ತನಿಖೆ ಮಾಡುತ್ತಿದ್ದೇವೆ" ಎಂದು ಉಟ್ರೇಶಿಟ್  ಪೋಲಿಸ್ ಇಲಾಖೆ ಟ್ವಿಟ್ಟರ್ ಮೂಲಕ ತಿಳಿಸಿದೆ.
"ಟ್ರಾಮ್ ನಲ್ಲಿ ಗ್ಉಂಡಿನ ದಾಳಿ  ಸಂಭವಿಸಿದ್ದು ಹಲವು ತುರ್ತು ಸೇವಾ ಹೆಲಿಕಾಪ್ಟರ್ ಗಳು ಸ್ಥಳಕ್ಕೆ ತೆರಳಿ ಸಹಾಯ ಒದಗಿಸಲು ನಿಯೋಜಿತವಾಗಿದೆ."
ಸೇತುವೆ ಸಮೀಪ ನಿಲ್ಲಿಸಿದ್ದ ಟ್ರಾಮ್ ಸುತ್ತಲೂ ಮುಖಗವಸು ಹಾಕಿದ್ದ ಪೋಲೀಸರು ಮತ್ತು ತುರ್ತು ವಾಹನಗಳಿರುವ ಚಿತ್ರಗಳನ್ನು ಸ್ಥಳೀಯ ಸುದ್ದಿ ಮಾದ್ಯಮಗಳು ಪ್ರಸಾರ ಮಾಡುತ್ತಿದೆ. ಪ್ರದೇಶದಲ್ಲಿನ ಟ್ರಾಮ್ ಟ್ರಾಫಿಕ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. 
ಕಳೆದ ವಾರವಷ್ಟೇ ನ್ಯೂಜಿಲ್ಯಾಂಡ್ ಮಸೀದಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವತ್ತಕ್ಕೆ ಹೆಚು ಜನ ಸಾವಿಗೀಡಾಗಿದ್ದರು.
SCROLL FOR NEXT