ವಿದೇಶ

ಕೀನ್ಯಾದ 'ರಾಣಿ ಆನೆ' ಸಾಯುವ ಮುನ್ನ ತೆಗೆದ ಅಪರೂಪದ ಚಿತ್ರಗಳು

Vishwanath S
ಅಪರೂಪದ ಆನೆಗಳ ಸಂತತಿಗೆ ಕೀನ್ಯಾ ಸುಂದರ ತಾಣ. ಇಲ್ಲಿನ ಆನೆಗಳು ಗಾತ್ರ ದೊಡ್ಡದು. ಅಂತೆ ದಂತಗಳು ನೆಲವನ್ನು ಮುಟ್ಟುವಷ್ಟು ಉದ್ದವಾಗಿರುತ್ತದೆ. 
ಇಲ್ಲಿನ ಹೆಣ್ಣು ಆನೆಯೊಂದು ಎಲ್ಲರ ಆಕರ್ಷಣಿಯ ಕೇಂದ್ರ ಬಿಂದುವಾಗಿತ್ತು. ಈ ಆನೆ ಒಂದು ರೀತಿಯಲ್ಲಿ ಆನೆಗಳಿಗೆ ರಾಣಿ ಎಂದು ಹೇಳಬಹುದಾಗಿತ್ತು. ಅದರ ದಂತ ನೆಲಕ್ಕೆ ಮುಟ್ಟುವಂತಿತ್ತು.
ದೊಡ್ಡ ಗಾತ್ರದ ಟಸ್ಕರ್ ಎಂಬ ಹೆಸರಿನ ಆನೆಗಳು ನೋಡಲು ಬೃಹತ್ ಗಾತ್ರ ಮತ್ತು ಅಪರೂಪದ ಆನೆಗಳು. ಈ ಆನೆಗಳ ಸಂತತಿ ಕಡಿಮೆಯಾಗುತ್ತಿದ್ದು 30ಕ್ಕಿಂತ ಕಡಿಮೆ ಆನೆಗಳು ಆಫ್ರಿಕಾದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.
ಆನೆಗಳ ರಾಣಿ ಎಂದು ಕರೆಸಿಕೊಳ್ಳಲು ಈ ಹೆಣ್ಣು ಆನೆಯ ಅಪರೂಪದ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆನೆ ಸಾಯುವ ಮುನ್ನ ಈ ಚಿತ್ರಗಳನ್ನು ಬ್ರಿಟಿಷ್ ಛಾಯಾಗ್ರಾಹಕ ವಿಲ್ ಬುರಾರ್ಡ್ ಲುಕಾಸ್ ಎಂಬುವರು ಅಪರೂಪದ ಚಿತ್ರಗಳನ್ನು ಸೆರೆಹಿಡಿದಿದ್ದರು. 
18 ತಿಂಗಳುಗಳ ಕಾಲ ಕೀನ್ಯಾದ ವೈಲ್ಡ್ ಲೈಫ್ ಸರ್ವಿಸ್ ಮತ್ತು ಸಾವೊ ಟ್ರಸ್ ಮುಖಾಂತರ ಈ ರಾಣಿ ಆನೆ ಕುರಿತು ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದರು. 
SCROLL FOR NEXT