ವಿದೇಶ

ಭಾರತೀಯ ಮೂಲದ ಜಗ್ ಮೀತ್ ಸಿಂಗ್ ಕೆನಡಾದಲ್ಲಿ ಇತಿಹಾಸ ಸೃಷ್ಟಿ

Prasad SN

ಒಟ್ಟಾವ: ಭಾರತೀಯ ಮೂಲದ ಜಗಮೀತ್ ಸಿಂಗ್ ಕೆನಡಾ ಸಂಸತ್ತಿನ ಸಾಮಾನ್ಯ ಸಭೆಗೆ ಚುನಾಯಿತರಾಗಿ, ಪ್ರಮುಖ ಪ್ರತಿಪಕ್ಷದ ಮೊದಲ ಬಿಳಿಯರಲ್ಲದ ನಾಯಕನೆಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ನ್ಯೂ ಡೆಮಾಕ್ರಟಿಕ್ ಪಾರ್ಟಿಯ ನಾಯಕರಾಗಿ ಸಿಖ್ ಪೇಟ ಧರಿಸಿದ ನಾಯಕ ಸೋಮವಾರ ಸಂಸತ್ತು ಪ್ರವೇಶಿಸುತ್ತಿದ್ದಂತೆ, ಎಲ್ಲ ಸದಸ್ಯರು ಹರ್ಷೋದ್ಗಾರ ಸೂಚಿಸಿ ಸಂತಸ ವ್ಯಕ್ತಪಡಿಸಿದರು. ಕಾಕತಾಳಿಯ ಎಂಬಂತೆ ಪ್ರಧಾನಿ ಜಸ್ಟಿನ್ ಟ್ರಾಡು  ಅವರು ತಮ್ಮ ಸಂಪುಟಕ್ಕೆ ಭಾರತೀಯ ಮಹಿಳೆಯೊಬ್ಬರ ಸೇರ್ಪಡೆಯ ನಂತರ, ಸಿಂಗ್ ನ್ಯೂ ಡೆಮಾಕ್ರಟಿಕ್ ಪಾರ್ಟಿಯ ನಾಯಕರಾಗಿ ನೇಮಕಗೊಂಡಿದ್ದಾರೆ.

ಫೆಬ್ರವರಿ 25ರಂದು ನಡೆದ ಫೆಡರಲ್ ಉಪ ಚುನಾವಣೆಯಲ್ಲಿ ಸಿಂಗ್ ಸಂಸತ್ತಿಗೆ ಚುನಾಯಿತರಾಗಿದ್ದರು.

ಚುನಾಯಿತ ಸಂಸತ್ ಸದಸ್ಯ ಜಗ್ ಮೀತ್ ಸಿಂಗ್ ಅವರು ತಮ್ಮ ಮೊದಲ ಭಾಷಣದಲ್ಲಿ  ಕಳೆದ ವಾರ ನ್ಯೂಜಿಲೆಂಡ್ ನಲ್ಲಿ ಅವಳಿ ಮಸೀದಿಗಳಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಸ್ತಾಪಿಸಿದರು.

ಅಲ್ಲದೆ ದಕ್ಷಿಣ ಬರ್ನ್ಬೆನಗರದಲ್ಲಿ ಜನರು ಎದುರಿಸುತ್ತಿರುವ ವಸತಿ ಸಮಸ್ಯೆ ಕುರಿತ ಪ್ರಶ್ನೆಯನ್ನು ಸರ್ಕಾರದ ಮುಂದೆ ಮಂಡಿಸಿದರು.

ಪ್ರಧಾನಿ ಟ್ರಾಡೂ, ಬಡತನ ವಿರುದ್ದ ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಂಸತ್ತಿನ ಮುಂದಿಡುವ ಮುನ್ನ, ಜಗ್ ಮೀತ್ ಸಿಂಗ್ ಅವರ ಸಂಸತ್ತಿನ ಸಾಮಾನ್ಯ ಸಭೆಗೆ ಚುನಾಯಿತರಾಗಿ ಬಂದಿರುವುದಕ್ಕೆ ಅಭಿನಂದಿಸಿದರು. ತಮ್ಮ ಸಂಪುಟದ ಪ್ರಮುಖ ಇಬ್ಬರು ಸಚಿವರ ರಾಜೀನಾಮೆಯಿಂದ ತೀವ್ರ ಸಂಕಷ್ಟಕ್ಕೆ ಪ್ರದಾನಿ ಸಿಲುಕೊಂಡ ನಿರ್ಣಾಯಕ ದಿನವೇ ಸಿಂಗ್ ಅವರ ಭಾಷಣ ಸಂಸತ್ತಿನಲ್ಲಿ ಪ್ರತಿಧ್ವನಿಸಿತು

ಮುಂದಿನ ಅಕ್ಟೋಬರ್ ನಲ್ಲಿ ಕೆನಡಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಿ ಟ್ರಾಡೋ ಮಧ್ಯಮ ವರ್ಗಗಳನ್ನು ಸೆಳೆಯಲು ಹಲವು ಆಕರ್ಷಕ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

SCROLL FOR NEXT