ವಿದೇಶ

ಐಎಸ್ ವಧು ಶಮೀಮಾ ಬೇಗಂ ಬಾಂಗ್ಲಾ ದೇಶಕ್ಕೆ ಬಂದರೆ ಮರಣ ದಂಡನೆ ಶಿಕ್ಷೆ; ಅಬ್ದುಲ್ ಮೊಮಿನ್

Nagaraja AB

ಢಾಕಾ: ಇಸ್ಲಾಮಿಕ್ ಸ್ಟೇಟ್- ಐಎಸ್ ಭಯೋತ್ಪಾದಕ ಗುಂಪಿನ  ವಧು ಶಮಿಮಾ ಬೇಗಂ ಬಾಂಗ್ಲಾ ದೇಶಕ್ಕೆ ಬಂದರೆ ಭಯೋತ್ಪಾದನೆ ಆರೋಪಗಳಿಗಾಗಿ ಮರಣ ದಂಡನೆ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಬಾಂಗ್ಲಾ ದೇಶದ ವಿದೇಶಾಂಗ ವ್ಯವಹಾರಗಳ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಶ್ರೀಮತಿ ಶಮೀಮಾ ಬೇಗಂ ಅವರಿಗೂ ಬಾಂಗ್ಲಾ ದೇಶಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಅಬ್ದುಲ್ ಮೊಮಿನ್ ಬಿಬಿಸಿಗೆ ತಿಳಿಸಿದ್ದಾರೆ.

19 ವರ್ಷದ ಯುವತಿ ಶಮೀಮಾ ಬೇಗಂ ಇಸ್ಲಾಮಿಕ್ ಸ್ಟೇಟ್ ಗುಂಪು ಸೇರಲು 2015 ರಲ್ಲಿ ಪೂರ್ವ ಲಂಡನ್ ನಿಂದ ಪರಾರಿಯಾಗಿದ್ದಳು.ಫೆಬ್ರವರಿಯಲ್ಲಿ ಆಕೆಯ ಬ್ರಿಟೀಷ್ ಪೌರತ್ವ ರದ್ದುಪಡಿಸಲಾಗಿತ್ತು.ಆಕೆ ಬಾಂಗ್ಲಾದೇಶದ ನಾಗರೀಕಗಳು ಎಂಬುದು ಆಕೆಯ ತಾಯಿಯ ಮೂಲಕ ತಿಳಿದು ಬಂದಿದೆ  ಎಂದು ಬ್ರಿಟನ್ ವಿದೇಶಾಂಗ ಇಲಾಖೆಯ ವಲಸೆ ವಿಭಾಗ ಹೇಳಿದೆ.

ಶ್ರೀಮತಿ ಬೇಗಂ ಅವರಿಗೆ ಬಾಂಗ್ಲಾದೇಶದ ಪೌರತ್ವ ಕೊಡುವ ಪ್ರಶ್ನೆಯೇ ಇಲ್ಲ ಅಥವಾ ದೇಶದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ವಿದೇಶಾಂಗ ಸಚಿವರು ಸ್ಪಷ್ಟಪಡಿಸಿದ್ದಾರೆ.

SCROLL FOR NEXT