ವಿದೇಶ

ಮಧ್ಯ ಪ್ರಾಚ್ಯಗೆ ಯುದ್ಧ ವಿಮಾನ ವಾಹಕ ರವಾನಿಸಿದ ಅಮೆರಿಕ, ಇರಾನ್ ಗೆ ಎಚ್ಚರಿಕೆ

Srinivasamurthy VN
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಮಧ್ಯ ಪ್ರಾಚ್ಯಗೆ ತನ್ನ ಯುದ್ಧ ವಿಮಾನವನ್ನು ರವಾನೆ ಮಾಡುವ ಮೂಲಕ ಇರಾನ್ ಗೆ ಗಂಭೀರ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಾತನಾಡಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು, ಇರಾನ್ ಗೆ ಸಾಕಷ್ಟು ಸಲಹೆ ಮತ್ತು ಎಚ್ಚರಿಕೆಯ ಹೊರತಾಗಿಯೂ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ ಯಾವುದೇ ಪರಿಸ್ಥಿತಿಗೂ ಸರ್ವಸನ್ನದ್ಧವಾಗಿರುವಂತೆ ಮದ್ಯ ಪ್ರಾಚ್ಯಗೆ ತನ್ನ ಅಬ್ರಾಹಂ ಲಿಂಕನ್ ಯುದ್ಜ ವಿಮಾನ ವಾಹಕವನ್ನು ರವಾನಿಸಲಾಗಿದೆ. ಯುದ್ಧವಾಹಕ ರವಾನೆ ಮೂಲಕ ನಾವು ಯುದ್ಧಕ್ಕೆ ಆಹ್ವಾನಿಸುತ್ತಿಲ್ಲ. ಆದರೆ ಯಾವುದೇ ಪರಿಸ್ಥಿತಿಗೂ ನಾವು ಸಿದ್ಧ ಎಂಬ ಸಂದೇಶವನ್ನು ಇರಾನ್ ಗೆ ನೀಡಬೇಕಿದೆ ಎಂದು ಹೇಳಿದ್ದಾರೆ.
ಅಂತೆಯೇ ಅಮೆರಿಕ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನೂ ಅಮೆರಿಕ ಸೇನೆ ವಿಫಲಗೊಳಿಸಲಿದೆ. ಇರಾನ್ ನ ನೇರ ದಾಳಿ ಅಥವಾ ಅದರ ಪ್ರಾಯೋಜಿತ ಉಗ್ರ ಸಂಘಟನೆಗಳ ದಾಳಿಯನ್ನೂ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಇತ್ತ ಇಸ್ರೇಲ್ ಕೂಡ ಇರಾನ್ ಮೇಲೆ ತನ್ನ ರಾಕೆಟ್ ದಾಳಿ ಮುಂದುವರೆಸಿದ್ದು, ಗಾಜಾ ಪಟ್ಟಿಯ ಪ್ರಮುಖ ಎರಡು ಗಡಿಗಳಲ್ಲಿ ಇಸ್ರೇಲ್ ಸೇನೆ ಪ್ರಾಬಲ್ಯ ಮೆರೆದಿದ್ದು, ಇಲ್ಲಿ ಇರಾನ್ ಮತ್ತು ಇಸ್ಲಾಮಿಕ್ ಉಗ್ರ ಸಂಘಟನೆಗಳಿಗೆ ಹಿನ್ನಡೆಯಾಗಿದೆ.
SCROLL FOR NEXT