ವಿದೇಶ

ಇಂಡೋನೇಷ್ಯಾದಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ, 6,500 ಅಡಿ ಎತ್ತರಕ್ಕೆ ದಟ್ಟ ಹೊಗೆ, ಬೂದಿ!

Srinivasamurthy VN
ಜಕಾರ್ತ: ದ್ವೀಪಗಳ ನಾಡು ಇಂಡೋನೇಷ್ಯಾದಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟಿಸಿದ್ದು, ಬರೊಬ್ಬರಿ 6,500 ಅಡಿ ಎತ್ತರದವರೆಗೂ ಹೊಗೆ ಮತ್ತು ಬೂದಿ ಅವರಿಸಿ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ.
ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಮೌಂಟ್​​ ಸಿನಾಬಂಗ್ ನಲ್ಲಿ ಇಂದು ಬೆಳಗ್ಗೆ ಜ್ವಾಲಾಮುಖಿ ಸ್ಫೋಟಿಸಿದ್ದು, ಪರಿಣಾಮ ಸುಮಾರು 6,500 ಅಡಿ ಎತ್ತರದಷ್ಟು ದಟ್ಟ ಹೊಗೆ ಮತ್ತು ಬೂದಿ ಆವರಿಸಿದೆ. 
2010ರಿಂದಲೂ ತೀವ್ರ ಚಟುವಟಿಕೆಯಿಂದ ಕೂಡಿದ್ದ ಮೌಂಟ್​​ ಸಿನಾಬಂಗ್ ಜ್ವಾಲಾಮುಖಿ 2016ರಲ್ಲಿ ಸ್ಫೋಟಿಸಿತ್ತು. ಇದೀಗ ಮೂರು ವರ್ಷಗಳ ಬಳಿಕ ಮತ್ತೆ ಜ್ವಾಲಾಮುಖಿ ಸ್ಫೋಟಿಸಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿ ಜ್ವಾಲಮುಖಿಯ ದೂಳು ಆವರಿಸಿದ್ದು, ಮುಂಜಾಗ್ರತ್ರಾ ಕ್ರಮವಾಗಿ ಸ್ಥಳೀಯ ಆಡಳಿತ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರವಾಗುವಂತೆ ಸೂಚಿಸಿದೆ.
ಈವರೆಗೆ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಹಾಗೂ ಜನರ ಸ್ಥಳಾಂತರಕ್ಕೆ ಆದೇಶ ನೀಡಲಾಗಿಲ್ಲ. ಈ ಹಿಂದೆಯೇ ಜ್ವಾಲಾಮುಖಿಯ ಸುತ್ತಮುತ್ತ ಪ್ರದೇಶದಲ್ಲಿ ನಿರ್ಬಂಧ ಹೇರಲಾಗಿದ್ದು, ಇಲ್ಲಿ ಯಾರೂ ವಾಸವಿಲ್ಲ ಎಂದು ತಿಳಿದುಬಂದಿದೆ. ಇನ್ನು ಜ್ವಾಲಾಮುಖಿಯ ಹೊಗೆಯಿಂದಾಗಿ  ಮೌಂಟ್​​ ಸಿನಾಬಂಗ್ ವಿಮಾನ ಹಾರಾಟಕ್ಕೆ ಸಮಸ್ಯೆ ಎದುರಾಗಿದ್ದು, ಸರ್ಕಾರದ ಆದೇಶಕ್ಕಾಗಿ ವಿಮಾನಯಾನ ಸಂಸ್ಥೆಗಳು ಕಾಯುತ್ತಿವೆ ಎಂದು ತಿಳಿದುಬಂದಿದೆ. 
130 ಜ್ವಾಲಾಮುಖಿಗಳು 
ಇಂಡೋನೇಷ್ಯಾದಲ್ಲಿ ಸುಮಾರು 130 ಜ್ವಾಲಾಮುಖಿಗಳು ಕಾರ್ಯ ಪ್ರವೃತ್ತವಾಗಿದ್ದು. 400 ವರ್ಷಗಳಲ್ಲೇ ಮೊದಲ ಬಾರಿಗೆ 2010ರಲ್ಲಿ ಸಿನಾಬಂಗ್​​ ಪರ್ವತದಿಂದ ಜ್ವಾಲಾಮುಖಿ ಸ್ಱೋಟಿಸಿತ್ತು. ನಂತರ 2013ರಲ್ಲಿಯೂ ಜ್ವಾಲಾಮುಖಿ ಸ್ಫೋಟಿಸಿ, ಅಂದಿನಿಂದ ನಿರಂತರವಾಗಿ ಜ್ವಾಲಾಮುಖಿ ಸಕ್ರಿಯವಾಗಿದೆ. 2014ರಲ್ಲಿ ಉಂಟಾದ ಸ್ಫೋಟದಲ್ಲಿ 16 ಮಂದಿ ಸಾವನ್ನಪ್ಪಿದ್ದರೆ, 2016ರಲ್ಲಿ ಸಂಭವಿಸಿದ್ದ ಜ್ವಾಲಾಮುಖಿ ಸ್ಫೋಟದಲ್ಲಿ 7 ಮಂದಿ ಬಲಿಯಾಗಿದ್ದರು.
SCROLL FOR NEXT