ವಿದೇಶ

ನೀರವ್ ಮೋದಿಗೆ 3ನೇ ಬಾರಿ ಬೇಲ್ ನಿರಾಕರಿಸಿದ ಯುಕೆ ಕೋರ್ಟ್: ಮೇ ಅಂತ್ಯದವರೆಗೂ ಜೈಲುವಾಸ ಖಾಯಂ

Raghavendra Adiga
ನವದೆಹಲಿ: ವಜ್ರದ ವ್ಯಾಪಾರಿ, ಪಿಎನ್ಬಿ ವಂಚನೆಯಲ್ಲಿ ಪ್ರಮುಖ ಆರೋಪಿಯಾಗಿ ದೇಶ ಬಿಟ್ಟು ಪರಾರಿಯಾಗಿರುವ ನೀರವ್ ಮೋದಿಗೆ ಯುನೈಟೆಡ್ ಕಿಂಗ್ ಡಂ ನ್ಯಾಯಾಲಯ ಬುಧವಾರ ಮೂರನೇ ಬಾರಿ ಜಾಮೀನು ನಿರಾಕರಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನೀರವ್ ಮೋದಿ ಲಂಡನ್ ನಲ್ಲಿ ಗಡಿಪಾರು ಪ್ರಕರಣ ಎದುರಿಸುತ್ತಿದ್ದಾರೆ. 
ಇಂದು ನ್ಯಾಯಾಲಯಕ್ಕೆ ಹಾಜರಾದ ನೀರವ್ ಮೋದಿಗೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಖ್ಯ ಮ್ಯಾಜಿಸ್ಟ್ರೇಟರ್ ಎಮ್ಮಾ ಅರ್ಬುತ್ ನೋಟ್ ಅವರು ಮೋದಿಗೆ ಜಾಮೀನು ನಿರಾಕರಿಸಿದರು.ನೀರವ್ ಮೋದಿ ಶರಣಾಗಲು ನಿರಾಕರಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ತರು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ 30 ಕ್ಕೆ ಮುಂದೂಡಿ ಆದೇಶಿಸಿದೆ..
SCROLL FOR NEXT