ವಿದೇಶ

ಇರಾನ್ ಜೊತೆಗೆ ಯುದ್ಧ ಮಾಡಲು ಅಮೆರಿಕ ಎದುರು ನೋಡುತ್ತಿಲ್ಲ: ಶ್ವೇತ ಭವನ

Nagaraja AB

ವಾಷಿಂಗ್ಟನ್ : ಇರಾನ್ ಜೊತೆಗೆ ಯುದ್ಧ ಮಾಡಲು ಅಮೆರಿಕ ಎದುರು ನೋಡುತ್ತಿಲ್ಲ  ಎಂದು ಶ್ವೇತ ಭವನ ಸ್ಪಷ್ಟಪಡಿಸಿದೆ. ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷರಾದಾಗಲೂ ಇರಾನ್ ಜೊತೆಗೆ ಅಂತಹ ಯುದ್ಧ ಮಾಡುವಂತಹ ನಿಲುವು ಹೊಂದಿಲ್ಲ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಇರಾನ್ ಜೊತೆಗಿನ ಯುದ್ಧಕ್ಕಾಗಿಯೇ ಮಧ್ಯ ಪೂರ್ವದಲ್ಲಿ ಅಮೆರಿಕ ಯುದ್ಧ ವಿಮಾನ ಹಾಗೂ ಬಾಂಬರ್ ಟಾಸ್ಕ್ ಪೋರ್ಸ್ ನಿಯೋಜನೆಯ ಘೋಷಣೆ ಮಾಡಿದೆ ಎನ್ನಲಾಗಿತ್ತು. ಆದರೆ,  ಅಸಾಧಾರಣ ಶಕ್ತಿ ಎದುರಿಸುವುದು  ಅಮೆರಿಕ ಅಥವಾ ಅದರ ಮಿತ್ರಪಕ್ಷಗಳ ಹಿತಾಸಕ್ತಿಯಾಗಿದೆ ಎಂದು ಸ್ಪಷ್ಟ ಸಂದೇಶವನ್ನು ಇರಾನ್ ಗೆ ಕಳುಹಿಸಲಾಗಿದೆ.

ಅಮೆರಿಕಾ ಇರಾನ್ ಜೊತೆಗೆ ಯುದ್ಧ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಶ್ವೇತ ಭವನ ಪ್ರೆಸ್ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್, ನಾನು ನಿಸ್ಸಂಶಯವಾಗಿ ನಂಬುವುದಿಲ್ಲ  ಎಂದಿದ್ದಾರೆ. ಆದರೆ, ಅಧ್ಯಕ್ಷರೂ ಮತ್ತೆ ತಮ್ಮ ಸ್ಥಾನದಲ್ಲಿ ಮುಂದುವರೆದರೂ ಯಾರೊಂದಿಗೂ ಯಾವುದೇ ರೀತಿಯ ಯುದ್ಧ ಮಾಡುವ ಮನಸ್ಸು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಇರಾನ್ ನಿಂದ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತಿರುವುದರಿಂದ ಮಧ್ಯ ಪೂರ್ವ ವಲಯದಲ್ಲಿ ಯುಎಸ್ ಎಸ್ ಅಬ್ರಹಾಂ ಲಿಂಕನ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಮತ್ತು ಬಾಂಬರ್ ಟಾಸ್ಕ್ ಪೋರ್ಸ್ ನನ್ನು ನಿಯೋಜಿಸುವುದಾಗಿ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಜಾನ್ ಬೊಲ್ಟಾನ್ ಭಾನುವಾರ ಹೇಳಿಕೆ ನೀಡಿದ್ದರು.

SCROLL FOR NEXT