ವಿದೇಶ

ಭಾರತದಲ್ಲಿ ಮತ್ತೊಮ್ಮೆ ಮೋದಿ ಹವಾ: ಪಾಕ್‍ನಲ್ಲಿರುವ ಪಾತಕಿ ದಾವೂದ್‍ಗೆ ಢವಢವ

Raghavendra Adiga
ಕರಾಚಿ: ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೆ ಅಧಿಕಾರದ ಗದ್ದುಗೆ ಏರುವ ಸಿದ್ದತೆಯಲ್ಲಿದೆ. ಅತ್ತ ಪಾಕಿಸ್ತಾನದಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಇದರಿಂದ ನಡುಕ ಶುರುವಾಗಿದೆ. ದಾವೂದ್  ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐಯ ಕೆಲವು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ತನ್ನ ಮನದಲ್ಲಿನ ಭಯವನ್ನು ತೋಡಿಕೊಂಡಿದ್ದಾನೆ ಎಂದು ಮಾದ್ಯಮ ವರದಿಯೊಂದು ಹೇಳಿದೆ.
2014ರಿಂದೀಚೆಗೆ ಮೋದಿ ಸರ್ಕಾರ ದಾವೂದ್ ಹಾಗು ಅವನ ಸಹಚರರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಲದೆ ಪಾತಕಿ ದಾವೂದ್ ನ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದು ಅವನ ಬಂಧನಕ್ಕಾಗಿ ಬಲೆ ಬೀಸಆಗಿದೆ.
ಇದರಿಂಡಾಗಿ ಮೋದಿ ಸರ್ಕಾರ ಈ ಚುನಾವಣೆಯಲ್ಲಿ ಸೋಲಬೇಕೆಂದು ನಿರೀಕ್ಷಿಸಿದ್ದ ದಾವೂದ್ ಮತ್ತೆ ಮೋದಿ ನೇತೃತ್ವದ ಎನ್ಡಿಎ ಅಧಿಕಾರಕ್ಕೇರುವ ಸುದ್ದಿ ದೊರಕಿದ ಕೆಲವೇ ಸಮಯದಲ್ಲಿ ಪಾಕ್ ಐಎಸ್ಐ ಅಧಿಕಾರಿಗಳನ್ನು ಸಂಪರ್ಕಿಸಿದ್ದು ತಮ್ಮ ಗುಂಪಿನ ಸದಸ್ಯರಿಗೆ ಭಾರತೀಯ ಗುಪ್ತಚರ ಏಜನ್ಸಿಗಳಿಂದ ರಕ್ಷಣೆ ನಿಡಬೇಕೆಂದು ಮನವಿ ಮಾಡಿದ್ದಾನೆ.
ನರೇಂದ್ರ ಮೋದಿ ನಾಯಕತ್ವದಲ್ಲಿ  ಅಮೆರಿಕ ಮತ್ತು ಇಸ್ರೇಲ್ ಜತೆಗೆ ಭಾರತ ಉತ್ತಮ ಬಾಂಧ್ವ್ಯ ಹೊಂದಿದೆ. ರಕ್ಷಣಾ ಸಹಕಾರ ಕ್ಷೇತ್ರದಲ್ಲಿ ಎರಡೂ ರಾಷ್ಟ್ರಗಳು ಭಾರತಕ್ಕೆ ಅತ್ಯುತ್ತಮ ರೀತಿಯಲ್ಲಿ ನೆರವಾಗುತ್ತಿದೆ. ಅಲ್ಲದೆ ವಿಶ್ವವ್ಯಾಪಿ ಮೋದಿ ಜನಪ್ರಿಯತೆ ಬೆಳೆಯುತ್ತಿರುವುದರಿಂದಾಗಿ ದಾವೂದ್ ಗೆ ಚಿಂತೆ ಆವರಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೋದಿ ತನ್ನನ್ನು ಭಾರತಕ್ಕೆ ಕರೆತರಲು ಏನೇ ಬೇಕಾದರೂ ಮಾಡಬಲ್ಲರು ಎಂದು ದಾವೂದ್ ಭಯಗೊಂಡಿದ್ದಾನೆ.ಅಮೆರಿಕಾ ಗುಪ್ತಚರ ಸಂಸ್ಥೆ ಸಿಐಎಮತ್ತು ಇಸ್ರೇಲ್ ನಮೋಸ್ಸಾದ್ ದಾವೂದ್ ನನ್ನು ಭಾರತಕ್ಕೆ ಕರೆತರೌ ಸಹಕರಿಸುತ್ತಿರುವುದು ಅವನಲ್ಲಿನ ಭಯವನ್ನು ಇನ್ನಷ್ಟು ದ್ವಿಉಗುಣಗೊಳಿಸಿದೆ.
SCROLL FOR NEXT