ವಿದೇಶ

ಕಾಲಾಪಾನಿ ಪ್ರದೇಶ ನಮ್ಮದು: ಭಾರತದ ಹೊಸ ಮ್ಯಾಪ್ ಗೆ ನೇಪಾಳ ಆಕ್ಷೇಪ

Lingaraj Badiger

ಕಠ್ಮಂಡು: ಭಾರತದ ಹೊಸ ಪೊಲಿಟಿಕಲ್ ಮ್ಯಾಪ್ ಗೆ ನೆರೆಯ ನೇಪಾಳ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಹೊಸ ಮ್ಯಾಪ್ ನಲ್ಲಿರುವ ಕಾಲಾಪಾನಿ ಪ್ರದೇಶ ನಮ್ಮದು ಎಂದು ಹೇಳಿದೆ.

ಕಳೆದ ಶನಿವಾರ ಕೇಂದ್ರ ಸರ್ಕಾರ ದೇಶದ ಹೊಸ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು–ಕಾಶ್ಮೀರ ಮತ್ತು ಲಡಾಖ್ ಒಳಗೊಂಡ ಹೊಸ ಮ್ಯಾಪ್ ಅನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕಾಲಾಪಾನಿಯೂ ಭಾರತದಲ್ಲಿದೆ. ಆದರೆ ಅದು ನಮ್ಮ ಪ್ರದೇಶ. ಕಾಲಾಪಾನಿ ನೇಪಾಳ ಭೂ ಪ್ರದೇಶದ ವ್ಯಾಪ್ತಿಗೆ ಬರುತ್ತದೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ ಹೇಳಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಭಾರತದ ಹೊಸ ಮ್ಯಾಪ್ ನಲ್ಲಿ ಕಾಲಾಪಾನಿಯನ್ನು ಸೇರಿಸಲಾಗಿದೆ ಎಂದು ನೇಪಾಳ ದೂರಿದೆ.

ವಿದೇಶಾಂಗ ಕಾರ್ಯದರ್ಶಿ ಮಟ್ಟದ ಜಂಟಿ ಸಭೆಯಲ್ಲಿ, ನೇಪಾಳ ಮತ್ತು ಭಾರತದ ನಡುವೆ ಬಾಕಿ ಇರುವ ಗಡಿ-ಸಂಬಂಧಿತ ಸಮಸ್ಯೆಗಳ ಕುರಿತು ಸಮಾಲೋಚಿಸಿ ಪರಿಹರಿಸುವ ಜವಾಬ್ದಾರಿಯನ್ನು ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ ಎಂದು ನೇಪಾಳ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT