ವಿದೇಶ

48 ಗಂಟೆ ಸಮಯ ಕೊಡುತ್ತೇವೆ, ಅಷ್ಟರೊಳಗೆ ರಾಜೀನಾಮೆ ಕೊಡಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಪ್ರತಿಪಕ್ಷ ಆಗ್ರಹ

Sumana Upadhyaya

ಇಸ್ಲಾಮಾಬಾದ್: ಮೌಲಾನಾ ಫಜ್ಲೂರ್ ರೆಹಮಾನ್ ನೇತೃತ್ವದ ವಿರೋಧ ಪಕ್ಷದ ನಾಯಕರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದು 48 ಗಂಟೆಗಳ ಸಮಯಾವಕಾಶವನ್ನು ನೀಡಿದ್ದಾರೆ. 


ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಇನ್ನು ಎರಡು ದಿನಗಳಲ್ಲಿ ಹೊಸ ದಿಕ್ಕನ್ನು ಪಡೆಯಲಿದೆ ಎಂದು ಹೇಳಿದ್ದಾರೆ. ಬಲಪಂಥೀಯ ಜಮೈತ್-ಉಲೆಮಾ-ಇ-ಇಸ್ಲಾಮ್ ಫಜ್ಲ್(ಜೆಯುಐ-ಎಫ್) ನಾಯಕ ಬೃಹತ್ ಪ್ರತಿಭಟನೆಯ ಮುಂಚೂಣಿ ವಹಿಸಿದ್ದು ಇದನ್ನು ಆಜಾದಿ ಮೆರವಣಿಗೆ ಎಂದು ಕರೆದಿದ್ದು ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದೆ. 


2018ರ ಸಾರ್ವತ್ರಿಕ ಚುನಾವಣೆಯನ್ನು ದುರುಪಯೋಗಪಡಿಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಸಾವಿರಾರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೆಹಮಾನ್, ಇಮ್ರಾನ್ ಖಾನ್ ಅವರು ರಾಜೀನಾಮೆ ಸಲ್ಲಿಸದೆ ಸರ್ಕಾರದ ಮಧ್ಯವರ್ತಿಗಳು ಮಾತುಕತೆಗೆ ಬರುವುದು ಬೇಡ ಎಂದರು.

SCROLL FOR NEXT