ವಿದೇಶ

ಭಾರತ - ನೇಪಾಳ ಗಡಿಯಲ್ಲಿ 5.3 ತೀವ್ರತೆಯ ಭೂಕಂಪ, ನಡುಗಿದ ದೆಹಲಿ

Lingaraj Badiger

ಕಠ್ಮಂಡು: ಭಾರತ–ನೇಪಾಳ ಗಡಿ ಪ್ರದೇಶದ ಅರಣ್ಯ ಭಾಗದಲ್ಲಿ ಮಂಗಳವಾರ ಲಘು ಭೂಕಂಪ ಸಂಭವಿಸಿದ್ದು, ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿ, ಉತ್ತರಾಖಂಡ್ ಮತ್ತು ಉತ್ತರ ಪ್ರದೇಶದ ಹಲವು ಕಡೆ ಭೂಮಿ ಕಂಪಿಸಿದ ಅನುಭವ ಆಗಿದೆ.

ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 5.3ರಷ್ಟಿತ್ತು. ಸ್ಥಳೀಯ ಕಾಲಮಾನ ಪ್ರಕಾರ ಸಂಜೆ 7.30 ಸುಮಾರಿಗೆ ಭೂಮಿ ಕಂಪಿಸಿದೆ.

ಅಮೆರಿಕದ ಭೂ ವಿಜ್ಞಾನ ಸಂಸ್ಥೆ ಪ್ರಕಾರ, ನೇಪಾಳದ ಖಪ್ತಾಡ್ ರಾಷ್ಟ್ರೀಯ ಉದ್ಯಾನದ ಬಳಿ 1.3 ಕಿ.ಮೀ ಆಳದಲ್ಲಿ ಕಂಪನ ಕೇಂದ್ರ ದಾಖಲಾಗಿದೆ.

ಸಾವು–ನೋವು ಸಂಭವಿಸಿದ ಬಗ್ಗೆ ಈವರೆಗೂ ವರದಿಯಾಗಿಲ್ಲ.

2015ರಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಭಾರಿ ಭೂಕಂಪದಲ್ಲಿ ಸುಮಾರು 9,000 ಜನ ಮೃತಪಟ್ಟಿದ್ದರು.

SCROLL FOR NEXT