ವಿದೇಶ

ಮೂರು ತಿಂಗಳ ನಂತರ ಭಾರತದೊಂದಿಗೆ ಅಂಚೆ ಸೇವೆ ಪುನಾರಂಭಿಸಿದ ಪಾಕ್

Lingaraj Badiger

ಇಸ್ಲಾಮಾಬಾದ್: ಜಮ್ಮ ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಭಾರತದೊಂದಿಗೆ ಸ್ಥಗಿತಗೊಂಡಿದ್ದ ಅಂಚೆ ಸೇವೆಯನ್ನು ಪಾಕಿಸ್ತಾನ ಪುನಾ ಆರಂಭಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ.

ಆಗಸ್ಟ್ 5 ರಂದು ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ, ಕಣಿವೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಿತ್ತು. ಬಳಿಕ ಪಾಕಿಸ್ತಾನ ಯಾವುದೇ ಪೂರ್ವ ಮಾಹಿತಿ ನೀಡದೆ ಉಭಯ ರಾಷ್ಟ್ರಗಳ ನಡುವಿನ ಅಂಚೆ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಸುಮಾರು ಮೂರು ತಿಂಗಳ ನಂತರ ಅಂಚೆ ಸೇವೆಯನ್ನು ಪುನಾರಂಭಿಸಿದೆ. ಆದರೆ ಆದರೆ ಪಾರ್ಸೆಲ್ ಸೇವೆ ಮೇಲೆ ನಿಷೇಧ ಮುಂದುವರೆದಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಆದಾಗ್ಯೂ, ಭಾರತದೊಂದಿಗೆ ಅಂಚೆ ಸೇವೆಯನ್ನು ಪುನಾರಂಭಿಸಿರುವ ಬಗ್ಗೆ ಪಾಕಿಸ್ತಾನ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಪಾಕಿಸ್ತಾನ ಯಾವುದೇ ಪೂರ್ವ ಮಾಹಿತಿ ನೀಡದೆ ಉಭಯ ರಾಷ್ಟ್ರಗಳ ನಡುವಿನ ಅಂಚೆ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ. ಆದರೂ ಪಾಕಿಸ್ತಾನ ಪಾಕಿಸ್ತಾನೇ.... ಅದು ಯಾವತ್ತೂ ಬದಲಾಗಲ್ಲ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಅವರು ಇತ್ತೀಚಿಗೆ ಆಕ್ರೋಶ ವ್ಯಕ್ತಪಡಿಸಿದ್ದರು.

SCROLL FOR NEXT