ವಿದೇಶ

ಆಫ್ಘಾನ್ ಶಾಂತಿ ಪ್ರಕ್ರಿಯೆ, ಕಾಶ್ಮೀರ ಕುರಿತು ದೂರವಾಣಿ ಮೂಲಕ ಇಮ್ರಾನ್ ಖಾನ್-ಟ್ರಂಪ್ ಚರ್ಚೆ

Lingaraj Badiger

ಇಸ್ಲಾಮಾಬಾದ್: ಆಫ್ಘಾನಿಸ್ತಾನದಲ್ಲಿನ ಶಾಂತಿ ಪ್ರಕ್ರಿಯೆಗಳು ಮತ್ತು ಕಾಶ್ಮೀರ ವಿಷಯ ಸೇರಿದಂತೆ ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಷಯಗಳನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಇಬ್ಬರು ಪಾಶ್ಚಾತ್ಯ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವುದು ‘ಸಕಾರಾತ್ಮಕ ಬೆಳವಣಿಗೆ’ ಎಂದು ಹೇಳಿರುವ ಇಮ್ರಾನ್ ಖಾನ್, ಒತ್ತೆಯಾಳುಗಳು ಸುರಕ್ಷಿತವಾಗಿ ಬಿಡುಗಡೆಯಾಗಿರುವುದು ಪಾಕಿಸ್ತಾನಕ್ಕೆ ಸಂತೋಷದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಒತ್ತೆಯಾಳುಗಳ ಬಿಡುಗಡೆಗೆ ಪಾಕಿಸ್ತಾನ ತೆಗೆದುಕೊಂಡ ಕ್ರಮಗಳಿಗಾಗಿ ಟ್ರಂಪ್ ಅವರು ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆಫ್ಘಾನಿಸ್ತಾನದಲ್ಲಿನ ಶಾಂತಿ ಪ್ರಕ್ರಿಯೆಗಳ ಪ್ರಗತಿಗೆ ಮತ್ತು ಸ್ಥಿರ ಆಫ್ಘಾನಿಸ್ತಾನದ ಗುರಿ ಸಾಧನೆಗೆ ಪಾಕಿಸ್ತಾನದ ಬದ್ಧತೆಯನ್ನು ಇಮ್ರಾನ್ ಖಾನ್ ಪುನರುಚ್ಛರಿಸಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಬಂಧಿತರಾಗಿದ್ದ ತನ್ನ ಸಂಘಟನೆಯ ಬಿಡುಗಡೆಗೆ ಪ್ರತಿಯಾಗಿ ಆಫ್ಘಾನಿಸ್ತಾದೊಂದಿಗೆ ಮಾಡಿಕೊಳ್ಳಲಾದ ಒಪ್ಪಂದದಂತೆ ತಾಲಿಬಾನ್ ಉಗ್ರರು ಮಂಗಳವಾರ ಅಮೆರಿಕದ ಕೆವಿನ್ ಕಿಂಗ್ ಮತ್ತು ಆಸ್ಟ್ರೇಲಿಯಾದ ಟಿಮೊತಿ ವೀಕ್ಸ್ ಅವರನ್ನು ಬಿಡುಗಡೆ ಮಾಡಿದ್ದರು.

SCROLL FOR NEXT