ವಿದೇಶ

ಮಹಾತ್ಮ ಗಾಂಧಿ 150ನೇ ಜನ್ಮದಿನ: ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ಯಾಲೆಸ್ಟೈನ್

Srinivasamurthy VN

ರಮಲ್ಲಾ: ಮಹಾತ್ಮ ಗಾಂಧಿಯವರ 150ನೇ ಜನ್ಮದಿನ ನಿಮಿತ್ತ ಪ್ಯಾಲೆಸ್ಟೈನ್ ಸರ್ಕಾರ ವಿಶೇಷ ಅಂಚೇ ಚೀಟಿ ಬಿಡುಗಡೆ ಮಾಡುವ ಮೂಲಕ ಭಾರತದ ರಾಷ್ಟ್ರಪಿತ ಗಾಂಧಿಗೆ ಗೌರವ ಸಮರ್ಪಣೆ ಮಾಡಿದೆ.

ಇಂದು ಪ್ಯಾಲೆಸ್ಟ್ಮೈನ್ ಸರ್ಕಾರ ಗಾಂಧೀಜಿಯವರ ಪರಂಪರೆ ಹಾಗೂ ಮೌಲ್ಯಗಳನ್ನು ಗೌರವಿಸುವ ಸಲುವಾಗಿ ಪ್ಯಾಲೆಸ್ಟೈನ್ ಮಂಗಳವಾರ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಪ್ಯಾಲೆಸ್ಟೈನ್​​ನಲ್ಲಿರುವ ಭಾರತದ ಪ್ರತಿನಿಧಿ ಸುನೀಲ್ ಕುಮಾರ್ ಸಮ್ಮುಖದಲ್ಲಿ ಪ್ಯಾಲೆಸ್ಟೈನ್ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಇಶಾಕ್ ಸೆಡೆರ್ ಅಂಚೆ ಚೀಟಿ ಬಿಡುಗಡೆಗೊಳಿಸಿದರು. 

ಈ ವೇಳೆ ಮಾತನಾಡಿದ ಪ್ಯಾಲೆಸ್ಟೈನ್ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಇಶಾಕ್ ಸೆಡೆರ್, ಮಹಾತ್ಮ ಗಾಂಧಿಯವರು ತೋರಿದ ಅಹಿಂಸೆ, ಮೌಲ್ಯಗಳು, ಬುದ್ಧಿವಂತಿಕೆ ಮತ್ತು ದೂರದೃಷ್ಟಿ ತತ್ವಗಳನ್ನುಒತ್ತಿ ಹೇಳಿದರು. 

ಮಹಾತ್ಮ ಗಾಂಧಿಯವರ 150ನೇ ಜನ್ಮದಿನೋತ್ಸವ ಯಶಸ್ವಿಗೊಳಿಸಲು ಭಾರತ ಸರ್ಕಾರ ಒಂದು ವರ್ಷದಿಂದ ರಮಲ್ಲಾ ಸೇರಿದಂತೆ ವಿವಿಧ ನಗರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅಪಾರ ಪ್ರಮಾಣದಲ್ಲಿ ಪ್ಯಾಲೆಸ್ಟೈನ್ ಯುವಕರು ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

SCROLL FOR NEXT