ವಿದೇಶ

ಜಾಹೀರಾತು ಫಲಕದಲ್ಲಿ 20 ನಿಮಿಷ ನೀಲಿ ಚಿತ್ರ ಪ್ರದರ್ಶಿಸಿದ ಕಿಡಿಗೇಡಿಗಳು

Lingaraj Badiger

ಸ್ಯಾನ್ ಫ್ರಾನ್ಸಿಸ್ಕೋ: ಕಿಡಿಗೇಡಿಗಳಿಬ್ಬರು ಜಾಹೀರಾತು ಫಲಕದ ಕಂಟ್ರೋಲ್ ರೂಂ ಹೈಜಾಕ್ ಮಾಡಿ, ಸುಮಾರು 20 ನಿಮಿಷಗಳ ಕಾಲ ನೀಲಿ ಚಿತ್ರ ಪ್ರದರ್ಶಿಸಿದ ಘಟನೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದೆ.

ಮಂಗಳವಾರ ಇಬ್ಬರು ಕಿಡಿಗೇಡಿಗಳು ತಮ್ಮ ಮುಖ ಮುಚ್ಚಿಕೊಂಡು, ಆಬರ್ನ್ ಹಿಲ್ಸ್ ನಲ್ಲಿರುವ ಡಿಜಿಟಲ್ ಜಾಹೀರಾತು ಪ್ರದರ್ಶನದ ಕಂಟ್ರೋಲ್ ರೂಂಗೆ ನುಗ್ಗಿ, ಸುಮಾರು 20 ನಿಮಿಷ ಅಶ್ಲೀಲ ಚಿತ್ರ ಪ್ರದರ್ಶನ ಮಾಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಾಹೀರಾತು ಫಲಕ ಪ್ರದರ್ಶಿಸುವ ಕಂಪನಿ ಕೂಡಲೇ ಅಶ್ಲೀಲ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕವಾಗಿ ಅಶ್ಲೀಲ ಚಿತ್ರ ಪ್ರದರ್ಶನ ಅಪರಾಧವಾಗಿದ್ದು, ಇದಕ್ಕೆ 500 ಡಾಲರ್ ದಂಡ ಹಾಗೂ 90 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಅಲ್ಲದೆ ಈ ಇಬ್ಬರ ವಿರುದ್ಧ ಕಳ್ಳತನದ ಕೇಸ್ ದಾಖಲಿಸಲು ಅವಕಾಶವಿದೆ ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT