ವಿದೇಶ

ಕಾಶ್ಮೀರ ವಿಷಯದಲ್ಲಿ ಪಾಕ್ ಪರ ನಿಂತ ಟರ್ಕಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟ!

Srinivas Rao BV

ಭಾರತ ಜಾಗತಿಕ ಮಟ್ಟದಲ್ಲಿ ದಿನದಿಂದ ದಿನಕ್ಕೆ ಬಲಿಷ್ಟವಾಗುತ್ತಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ಬೆಳವಣಿಗೆಗಳಲ್ಲೂ ಯಾವೊಂದು ದೇಶ ಕೂಡ ಭಾರತದ ವಿರುದ್ಧ ಮಾತನಾಡುವ ಧೈರ್ಯ ತೋರಲಿಲ್ಲ. ಆದರೆ ಈ ವಿಷಯದಲ್ಲಿ ಟರ್ಕಿ ಪಾಕ್ ಪರ ನಿಂತು ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ!

ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗಾನ್ ಇರಲಾರದೇ ಇರುವೆ ಬಿಟ್ಕೊಂಡ್ರು ಎಂಬಂತೆ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಪರ ನಿಂತು ಯಡವಟ್ಟು ಮಾಡಿಕೊಂಡಿದ್ದಾರೆ. ಅದಕ್ಕೆ ತಕ್ಕ ಪರಿಣಾಮವನ್ನೂ ಎದುರಿಸಿದ್ದಾರೆ. 

ಕಾಶ್ಮೀರದ ವಿಷಯದಲ್ಲಿ ಪಾಕ್ ಪರ ನಿಂತ ಟರ್ಕಿಗೆ ಬುದ್ಧಿ ಕಲಿಸಿರುವ ಭಾರತ ಯುದ್ಧನೌಕೆ ತಯಾರಿಯ ಕುರಿತ ಒಪ್ಪಂದವನ್ನು ಟರ್ಕಿ ಕಂಪೆನಿಯೊಂದಿಗೆ ಮಾಡದೇ ಇರಲು ನಿರ್ಧರಿಸಿ ಟರ್ಕಿಗೆ ಬರೊಬ್ಬರಿ 16,560 ಕೋಟಿ ರೂಪಾಯಿ ನಷ್ಟವಾಗುವಂತೆ ಮಾಡಲು ತೀರ್ಮಾನಿಸಿದೆ. ಹಿಂದೂಸ್ಥಾನ್‌ ಶಿಪ್‌ಯಾರ್ಡ್‌ ಲಿ. (ಎಚ್‌ಎಸ್‌ಎಲ್‌) ಟರ್ಕಿಯ ಮಿಸೆಸ್‌ ಅಂದೋಲು ಶಿಪ್‌ಯಾರ್ಡ್‌ ಜತೆಗೆ 16,560 ಕೋಟಿ ರೂ. ವೆಚ್ಚದಲ್ಲಿ ನೌಕೆ ತಯಾರಿಗೆ ಒಪ್ಪಂದ ನಡೆಯಬೇಕಿತ್ತು. ಆದರೆ ಕಾಶ್ಮೀರ ವಿಷಯದಲ್ಲಿ ಟರ್ಕಿ ಪಾಕ್ ಪರ ನಿಲುವು ತೆಗೆದುಕೊಂಡ ಬೆನ್ನಲ್ಲೇ ಭಾರತ ಈ ಒಪ್ಪಂದವನ್ನು ಏಕಾಏಕಿ ಸ್ಥಗಿತಗೊಳಿಸಲು ತೀರ್ಮಾನಿಸಿದೆ. 

ಎಫ್ಎಸ್‌ಎಸ್‌ ಯುದ್ಧ ನೌಕೆಗಳ ತಯಾರಿಕೆ ಒಪ್ಪಂದಕ್ಕೆ ಜರ್ಮನಿ, ಟರ್ಕಿ ಮತ್ತು ಫ್ರಾನ್ಸ್‌ನ ಕಂಪೆನಿಗಳನ್ನು ಅಂತಿಮಗೊಳಿಸಲಾಗಿತ್ತು. ಒಟ್ಟು 5 ನೌಕೆಗಳ ತಯಾರಿಗೆ ಒಪ್ಪಂದ ನಡೆಯಬೇಕಿತ್ತು. ಈಗ ಟರ್ಕಿ ಬದಲಿಗೆ ಬದಲಿಗೆ ಜರ್ಮನಿ ಅಥವಾ ಫ್ರಾನ್ಸ್‌ ಕಂಪೆನಿಗಳನ್ನು ಭಾರತ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

SCROLL FOR NEXT