ವಿದೇಶ

'ಕುಚ್ ಕುಚ್ ಹೋತಾ ಹೈ' ಹಾಡು ಹೇಳಿ ಅಚ್ಚರಿಗೊಳಿಸಿದ ಮಡಗಾಸ್ಕರ್ ರಕ್ಷಣಾ ಮಂತ್ರಿ!

Raghavendra Adiga

ಮಡಗಾಸ್ಕರ್‌ನ ರಕ್ಷಣಾ ಸಚಿವ ಜನರಲ್ ಲಿಯಾನ್ ಜೀನ್ ರಿಚರ್ಡ್ ರಾಕೋಟೊನಿರಿನಾ ಅವರು ಉತ್ತರ ಬಂದರು ನಗರವಾದ ಆಂಟಿಶಿರಾನಾದಲ್ಲಿ ಬೀಡುಬಿಟ್ಟಿರುವ ನಾಲ್ಕು ಭಾರತೀಯ ನೌಕಾಪಡೆಯ ಹಡಗುಗಳ ಆತಿಥ್ಯ ವಹಿಸಿ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಚ್ಚರಿ ಎನ್ನುವಂತೆ ಖ್ಯಾತ ಬಾಲಿವುಡ್ ಗೀತೆ 'ಕುಚ್ ಕುಚ್ ಹೋತಾ ಹೈ' ಹಾಡು ಹೇಳಿದ್ದಾರೆ.

ಸಚಿವರು ಈ ಮೂಲಕ ಮಡಗಾಸ್ಕರ್‌ನಲ್ಲಿ  ವಾಸಿಸುವ ಭಾರತೀಯ ವಲಸೆಗಾರರೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ನಡೆಸಿದ್ದಾರೆ.

ಇದು ಅಚ್ಚರಿಯ ಆಯ್ಕೆಯಾಗಿತ್ತು. ಏಕೆಂದರೆ ರಕ್ಷಣಾ ಸಚಿವರು ಬೇರೆ ಯಾವುದೇ ಬಾಲಿವುಡ್ ಹಾಡು ಕೇಳುವ ಬದಲು  ಶಾರುಖ್ ಖಾನ್ ಅಭಿನಯದ 'ಕುಚ್ ಕುಚ್ ಹೋತಾ ಹೈ' ಚಿತ್ರದ ಶೀರ್ಷಿಕೆ ಗೀತೆಯನ್ನು ಆಯ್ಕೆ ಮಾಡಿದ್ದಾರೆ.ಹೆಚ್ಚಾಗಿ ಗುಜರಾತಿ ಸಮುದಾಯವಿದ್ದ ಸಮೂಹವನ್ನುದ್ದೇಶಿಸಿ ಸಚಿವರು ಹಿಂದಿಗೆ ಅನುವಾದಿಸಿದ ಭಾಷಣ ಮಾಡಿದ ಬಳಿಕ ಈ ಗೀತೆಯನ್ನು ಹಾಡಲು ಆಯ್ಕೆ ಮಡಿದ್ದಾರೆ. 

ಇದರ ಬಳಿಕ ಸಚಿವರು ಮಲಗಾಸಿ ನೌಕಾಪಡೆಯ ಮುಖ್ಯಸ್ಥರು ಮತ್ತು ಮಲಗಾಸಿ ಸಶಸ್ತ್ರ ಪಡೆಗಳ ಇತರ ಹಿರಿಯ ಸದಸ್ಯ, ಹಡಗುಗಳ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದರು ಮತ್ತು ಭಾರತೀಯ ವಲಸೆಗಾರರೊಂದಿಗೆ ಬೆರೆತರು.ಈ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ತರಬೇತುದಾರರು ವಿವಿಧ ಭಾರತೀಯ ನೃತ್ಯಗಳನ್ನು ಪ್ರದರ್ಶಿಸಿದರು.

ಭಾರತೀಯ ನೌಕಾಪಡೆಯ ಸಾಗರೋತ್ತರ ನಿಯೋಜನೆಯ ಭಾಗವಾಗಿ, ಭಾರತೀಯ ನೌಕಾಪಡೆಯ ಮೊದಲ ತರಬೇತಿ ದಳಗಳಾದ ಭಾರತೀಯ ನೌಕಾ ಹಡಗು ತೀರ್, ಸುಜಾತಾ ಹಾಗೂ  ಭಾರತೀಯ ಕೋಸ್ಟ್ ಗಾರ್ಡ್ ಹಡಗು ಸಾರಥಿ ಮೂರು ದಿನಗಳ ಭೇಟಿಗಾಗಿ ಅಕ್ಟೋಬರ್ 1 ರಂದು ಮಡಗಾಸ್ಕರ್‌ನ ಆಂಟಿರಾನಾನಾಗೆ ಆಗಮಿಸಿದವು. ಪ್ರಥಮ ತರಬೇತಿ ದಳದ ಹಿರಿಯ ಅಧಿಕಾರಿ ಕ್ಯಾಪ್ಟನ್ ವರುಣ್ ಸಿಂಗ್, ಐಎನ್‌ಎಸ್ ತಿರ್‌ನ ಕಮಾಂಡಿಂಗ್ ಆಫೀಸರ್ ಕೂಡ ಆಗಿದ್ದಾರೆ.

'ನೌಕಾಪಡೆಯ ಸ್ನೇಹಕ್ಕಾಗಿ ಸೇತುವೆ' ನಿರ್ಮಿಸುವ ಮತ್ತು ಮಿತ್ರರಾಷ್ಟ್ರಗಳೊಡನೆ  ಅಂತರರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಭಾರತೀಯ ನೌಕಾಪಡೆಯ ಮಿಷನ್‌ನ ಭಾಗವಾಗಿ ಭಾರತೀಯ ನೌಕಾಪಡೆಯ ಹಡಗುಗಳನ್ನು ನಿಯಮಿತವಾಗಿ ವಿದೇಶಗಳಲ್ಲಿ ನಿಯೋಜಿಸಲಾಗಿದೆ.ರಾಕೋಟೊನಿರಿನಾ ಅದೇ ದಿನ ಆಂಟಿಸಿರಾನಾದಲ್ಲಿನ ಭಾರತೀಯ ನೌಕಾ ಹಡಗುಗಳಿಗೆ ಭೇಟಿ ನೀಡಿದ್ದರು ಮತ್ತು ಭಾರತ ಮತ್ತು ಮಡಗಾಸ್ಕರ್ ನಡುವಿನ ರಕ್ಷಣಾ ಸಹಕಾರವನ್ನು ಇನ್ನಷ್ಟು ಬಲಪಡಿಸಲು  ಚರ್ಚೆಗಳನ್ನು ನಡೆಸಿದ್ದರು.

SCROLL FOR NEXT