ವಿದೇಶ

ಕಾಸ್ಮೋಲಜಿ ಸಂಶೋಧನೆಗೆ ಒಲಿದ ಭೌತಶಾಸ್ತ್ರ ನೊಬೆಲ್

Raghavendra Adiga

ಭೌತಶಾಸ್ತ್ರ ವಿಭಾಗದ 2019 ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು ಫಿಸಿಕಲ್ ಕಾಸ್ಮೋಲಜಿ ಯಲ್ಲಿ ಸೈದ್ಧಾಂತಿಕ ಆವಿಷ್ಕಾರಗಳಿಗಾಗಿ ಸಂಶೋಧನೆ ನಡೆಸಿದ ಒಬ್ಬ ಸಂಶೋಧಕ ಹಾಗೂ ಸೌರ ಮಾದರಿ ನಕ್ಷತ್ರವನ್ನು ಪರಿಭ್ರಮಿಸುವ ಎಕ್ಸ್‌ಪ್ಲೋಪ್ಲೇಟ್‌ನ ಆವಿಷ್ಕಾರಕ್ಕಾಗಿನ ಇಬ್ಬರು ಸಂಶೋಧಕರಿಗೆ ನೀಡಲಾಗಿದೆ.

ಫಿಸಿಕಲ್ ಕಾಸ್ಮೋಲಜಿ ಯಲ್ಲಿ ಸಂಶೋದ್ಜಕ ಜೇಮ್ಸ್ ಪೀಬಲ್ಸ್‌ ಹಾಗೂ ಸೌರ ಮಾದರಿ ನಕ್ಷತ್ರ ಪರಿಭ್ರಮಣೆ ಕುರಿತ ಎಕ್ಸ್‌ಪ್ಲೋಪ್ಲೇಟ್‌ನ ಸಂಶೋಧನೆ ನಡೆಸಿದ ಮೈಕೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ಅವರುಗಳು ಈ ಸಾಲಿನ ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎರಡು ದಶಕಗಳಲ್ಲಿ ಜೇಮ್ಸ್ ಪೀಬಲ್ಸ್ ಅಭಿವೃದ್ಧಿಪಡಿಸಿದ ಸೈದ್ಧಾಂತಿಕ  ಮಾದರಿ ಬಿಗ್ ಬ್ಯಾಂಗ್ ನಿಂದ ಇಂದಿನವರೆಗೆ ಬ್ರಹ್ಮಾಂಡದ ಇತಿಹಾಸದ ಕುರಿತಾದ ಆಧುನಿಕ ತಿಳುವಳಿಕೆಯ ಅಡಿಪಾಯವಾಗಿದೆ.

ಇನ್ನು 1995ರಲ್ಲಿ  ಮೈಕೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ನಮ್ಮ ಸೌರಮಂಡಲದ ಆಚೆಗೆ  ಮೊದಲ ಗ್ರಹವನ್ನು ಕಂಡುಹಿಡಿದಿದ್ದು ಅದೊಂದು ಸೌರ ಮಾದರಿಯ ನಕ್ಷತ್ರದ ಸುತ್ತ ಪರಿಭ್ರಮಿಸುತ್ತಿರುವುದನ್ನು ಅವರು ಕಂಡುಕೊಂಡಿದ್ದರು.

SCROLL FOR NEXT