ವಿದೇಶ

ಪಾಕಿಸ್ತಾನ: ಪಂದ್ಯದ ವೇಳೆ ಹೃದಯಾಘಾತದಿಂದ ಅಂಪೈರ್ ಸಾವು

Shilpa D

ಕರಾಚಿ: ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಸ್ಥಳೀಯ ಆಂಪೈರೊಬ್ಬರು ಕಾರ್ಯನಿರ್ವಹಿಸುತ್ತಿದ್ದ ವೇಳೆಯೇ ಹೃದಯಾಘಾತ ಉಂಟಾಗಿ ಕೊನೆಯುಸಿರೆಳೆದಿದ್ದಾರೆ.

ಕರಾಚಿಯಲ್ಲಿ ಸೋಮವಾರ ಕ್ಲಬ್ ಮಟ್ಟದ ಪಂದ್ಯವೊಂದರಲ್ಲಿ ಅಂಫೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾಸೀಮ್ ಶೇಖ್ ಅವರು ಹೃದಯಾಘಾತ ಉಂಟಾಗಿ ಮೈದಾನದಲ್ಲೇ ಉರುಳಿದರು. ತಕ್ಷಣ ಅವರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದ ಮಧ್ಯೆ ಅಸುನೀಗಿದ್ದಾರೆ.

ನಾಸೀಮ್ ಶೇಖ್ ಅವರಿಗೆ 56 ವರ್ಷ ವಯಸ್ಸಾಗಿತ್ತು. ಅವರು ಮೈದಾನದಲ್ಲಿ ಉರುಳುತ್ತಿದ್ದಂತೆ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ಸಮೀಪ ತೆರಳುತ್ತಿದ್ದಂತೆ ನಾಸೀಮ್ ಮೃತಪಟ್ಟರು ಎಂದು ಪಂದ್ಯದ ಆಯೋಜಕರು ಮಾಹಿತಿ ನೀಡಿದ್ದಾರೆ.

SCROLL FOR NEXT