ವಿದೇಶ

ವಿಶ್ವಸಂಸ್ಥೆಗೆ ಬಾಕಿ ನೀಡಬೇಕಿದ್ದ ಹಣ ಹಿಂತಿರುಗಿಸಿದ ಭಾರತ!

Srinivas Rao BV

ವಿಶ್ವಸಂಸ್ಥೆಗೆ ಬಾಕಿ ನೀಡಬೇಕಿದ್ದ ಹಣವನ್ನು ಭಾರತ ಹಿಂತಿರುಗಿಸಿದ್ದು, ಈ ಬಗ್ಗೆ ಭಾರತದ ಖಾಯಂ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್ ಹೇಳಿದ್ದಾರೆ. 

193 ರಾಷ್ಟ್ರಗಳಿರುವ ವಿಶ್ವಸಂಸ್ಥೆಯಲ್ಲಿ 35 ರಾಷ್ಟ್ರಗಳು ಯುಎನ್ ಗೆ ವಾಪಸ್ ನೀಡಬೇಕಿದ್ದ ಬಾಕಿ ಹಣವನ್ನು ಹಿಂತಿರುಗಿಸಿದ್ದು, ಈ ಪೈಕಿ ಭಾರತವೂ ಇದೆ. ಅಧಿಕೃತ ಮಾಹಿತಿಗಳ ಪ್ರಕಾರ ವಿಶ್ವಸಂಸ್ಥೆ 200 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಹಣಕಾಸಿನ ಕೊರತೆ ಎದುರಿಸುತ್ತಿದೆ. 

ವಿಶ್ವಸಂಸ್ಥೆಗೆ ಹಣ ವಾಪಸ್ ನೀಡಿರುವ ರಾಷ್ಟ್ರಗಳ ಪಟ್ಟಿಗಳನ್ನು ಸಯೀದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದು, ಆಸ್ಟ್ರೇಲಿಯಾ, ಭೂತಾನ್, ಕೆನಡಾ, ಡೆನ್ಮಾರ್ಕ್, ಫಿನ್ಲ್ಯಾಂಡ್, ಜರ್ಮನಿ, ಐರ್ಲೆಂಡ್, ನೆದರ್ಲ್ಯಾಂಡ್, ನ್ಯೂಜಿಲ್ಯಾಂಡ್, ಸಿಂಗಪೂರ್, ಸ್ವಿಟ್ಜರ್ಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳಿವೆ. 

ಬಾಕಿ ನೀಡಬೇಕಿರುವ ರಾಷ್ಟ್ರಗಳಪಟ್ಟಿಯನ್ನು ವಿಶ್ವಸಂಸ್ಥೆ ಇನ್ನಷ್ಟೇ ಪ್ರಕಟಿಸಬೇಕಿದೆ. ಒಂದು ಮೂಲಗಳ ಪ್ರಕಾರ ಅಮೆರಿಕ, ಬ್ರೆಜಿಲ್, ಅರ್ಜೆಂಟೀನ, ಮೆಕ್ಸಿಕೋ, ಇರಾನ್, ವೆನಿಜ್ಯುವೆಲಾ, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಇಸ್ರೇಲ್, ಸೌದಿ ಅರೇಬಿಯಾ, ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ಸೇರಿದಂತೆ ಒಟ್ಟು 64 ರಾಷ್ಟ್ರಗಳು ಬಾಕಿ ಮೊತ್ತವನ್ನು ನೀಡಬೇಕಿದೆ. 

SCROLL FOR NEXT