ವಿದೇಶ

ಟೈಫೂನ್ ಗೆ ಜಪಾನ್ ನಲ್ಲಿ 33 ಜನ ಸಾವು

Srinivas Rao BV

ಟೋಕಿಯೋ: ಟೈಫೂನ್ (ಚಂಡಮಾರುತ) ಹಿಗಿಬಿಸ್ ಜಪಾನ್ ಗೆ ಅಪ್ಪಳಿಸಿದ್ದು, ಬರೊಬ್ಬರಿ 33 ಜನರು ಸಾವನ್ನಪ್ಪಿದ್ದರೆ 187 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. 

ಕನಗಾವಾ, ತೋಚಿಗಿ, ಗುನ್ಮಾ, ಮಿಯಾಗಿ, ಫುಕುಶಿಮಾ, ಸೈತಮಾ, ಇವಾಟೆ, ನಾಗಾನೊ, ಇಬರಾಕಿ, ಚಿಬಾ ಮತ್ತು ಶಿಜುವಾಕಾ ಪ್ರಾಂತ್ಯಗಳು, ಎನ್‌ಎಚ್‌ಕೆ ಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ಈ ವರೆಗೂ 18 ಜನರು ನಾಪತ್ತೆಯಾಗಿದ್ದಾರೆ. 

ಜಪಾನ್ ಪ್ರಧಾನಿ ಶಿಂಜೋ ಅಬೆ ಟೈಫೂನ್ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ್ದು, 110,000 ಕ್ಕೂ ಹೆಚ್ಚು ಪೊಲೀಸ್, ಅಗ್ನಿಶಾಮಕ, ಕಡಲ ಕಾವಲು ಪಡೆ, ಸ್ವಯಂಸೇವಕ ರಕ್ಷಣಾ ಪಡೆಗಳ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ. 

ಟೈಫೂನ್ ಪರಿಣಾಮವಾಗಿ ಜಪಾನ್  ದೇಶೀಯವಾಗಿ ಸಂಚರಿಸುವ 800 ವಿಮಾನಗಳನ್ನು ರದ್ದುಗೊಳಿಸಿದ್ದು, ಟೋಕಿಯೋ ಸುತ್ತಮುತ್ತ ಇರುವ ಪ್ರದೇಶಗಳ ರೈಲು ಸಂಚಾರವೂ ಕೂಡ ಸ್ಥಗಿತಗೊಂಡಿದೆ.  ಇದಕ್ಕೂ ಒಂದು ದಿನ ಮುನ್ನ ಜಪಾನ್ ಭೂಕಂಪನದಿಂದ ನಲುಗಿತ್ತು. 

SCROLL FOR NEXT