ವಿದೇಶ

ಭೀಭತ್ಸ ಕೃತ್ಯ: ನಾಲ್ವರನ್ನು ಕೊಂದು,ಮೃತದೇಹದೊಂದಿಗೆ ಕಾರಿನಲ್ಲಿ ಠಾಣೆಗೆ ಬಂದ ಟೆಕ್ಕಿ!

Nagaraja AB

ಸ್ಯಾನ್ ಫ್ರಾನ್ಸಿಸ್ಕೋ: ಅಪಾರ್ಟ್ ಮೆಂಟ್ ನಲ್ಲಿ ಮೂವರನ್ನು ಕೊಂದ 53 ವರ್ಷದ ಭಾರತೀಯ ಮೂಲದ ಟೆಕ್ಕಿಯೊಬ್ಬ,ಕಾರಿನಲ್ಲಿ ಮೃತದೇಹವೊಂದನ್ನು ಇಟ್ಟುಕೊಂಡು ಬಂದು ಅಮೆರಿಕಾದ ಉತ್ತರ ಕ್ಯಾಲಿಫೋರ್ನಿಯಾ ಪೊಲೀಸ್ ಠಾಣೆಗೆ ಬಂದಿದ್ದಾನೆ. ನಂತರ  350 ಕಿಲೋ ಮೀಟರ್ ದೂರದಲ್ಲಿರುವ ತನ್ನ ಅಪಾರ್ಟ್ ಮೆಂಟ್ ನಲ್ಲಿ ಇತರ ಮೂವರನ್ನು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಮೃತರೆಲ್ಲರೂ ಹಂತಕ ಶಂಕರ್ ನಾಗಪ್ಪ ಹನ್ ಗುದ್ ಅವರ ಸಂಬಂಧಿಕರು ಇರಬಹುದೆಂದು ಶಂಕಿಸಲಾಗಿದೆ ಎಂದು ರೊಸ್ ವೆಲ್ಲಿ ಪೊಲೀಸ್ ಇಲಾಖೆ ಕ್ಯಾಪ್ಟನ್ ಜೊಸುಹಾ ಸಿಮೊನ್ ಹೇಳಿದ್ದಾರೆ.

ಹತ್ಯೆಗೀಡಾದವರ ಹೆಸರನ್ನು ಹೇಳಲು ಹಂತಕ ನಿರಾಕರಿಸಿದ್ದಾನೆ. ಆದರೆ, ಅವರೆಲ್ಲಾ ಆತನ ಕುಟುಂಬ ಸದಸ್ಯರು ಎಂಬುದಾಗಿ ಶಂಕಿಸಲಾಗಿದೆ. ಈ ಪೈಕಿ ಇಬ್ಬರು ಯುವಕರು ,ಇಬ್ಬರು ಬಾಲಕರು ಆಗಿದ್ದಾರೆ.ನಾಲ್ವರನ್ನು ಹತ್ಯೆ ಮಾಡಿರುವ ಆರೋಪದ ಮೇರೆಗೆ  ಸೌತ್ ಪ್ಲೇಸರ್ ಜೈಲಿನಲ್ಲಿ ಕಸ್ಟಡಿಯಲ್ಲಿ ಇಡಲಾಗಿದೆ ಎಂದು  ಅವರು ತಿಳಿಸಿದ್ದಾರೆ. 

ಹನ್ ಗುದ್  ಡಾಟಾ ಸ್ಪೆಷಲಿಸ್ಟ್ ಆಗಿ ಅನೇಕ ಕಂಪನಿಗಳಲ್ಲಿ ಕೆಲಸ ಮಾಡಿರುವುದು ಆತನ ಪ್ರೂಪೈಲ್ ನಿಂದ ತಿಳಿದುಬಂದಿದೆ. ಈ ಘಟನೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವವರಲ್ಲಿ ಆತಂಕ ಮೂಡಿಸಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ.  ಠಾಣೆಯಿಂದ ಹೊರಗಡೆ ಬಂದು ಹುನ್ ಗುದ್ ಕಾರನ್ನು ಪರಿಶೀಲಿಸಿದಾಗ ಆತನ ಹೇಳುತ್ತಿರುವುದು ನಿಜವೆನಿಸಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಪರೀಷ್ ಕ್ರಾಸ್ ತಿಳಿಸಿದ್ದಾರೆ.

ಆರೋಪಿಯ ಅಪಾರ್ಟ್ ಮೆಂಟ್ ಗೆ ಹೋಗಿ ಪರಿಶೀಲಿಸಿದಾಗ ಇತರ ಮೂವರ ಮೃತದೇಹಗಳು ಕಂಡುಬಂದಿವೆ. ನಂತರ ಆತನನ್ನು 
 ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಮಾನಸಿಕ ಕಾರಣದಿಂದ ಈ ರೀತಿಯ ಭೀಭತ್ಸ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ರಕ್ತ ಸಂಬಂಧಿಗಳು ಬರುವವರೆಗೂ ಮೃತರ ಗುರುತನ್ನು  ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸ್ ಅಧಿಕಾರಿ ಸಿಮೊನ್ ಹೇಳಿದ್ದಾರೆ

SCROLL FOR NEXT