ಇಮ್ರಾನ್ ಖಾನ್ 
ವಿದೇಶ

ಪಾಕಿಸ್ತಾನಕ್ಕೆ ಅಂತಿಮ ಗಡುವು ನೀಡಿದ ಎಫ್‌ಎಟಿಎಫ್! ಭಯೋತ್ಪಾದನೆ ಕಪ್ಪುಪಟ್ಟಿ ಸೇರ್ಪಡೆಯಿಂದ ತಾತ್ಕಾಲಿಕ ರಿಲೀಫ್

ಒಂದು ಮಹತ್ವದ ಬೆಳವಣಿಗೆಯಲ್ಲಿ ಪಾಕಿಸ್ತಾನವು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಕಪ್ಪುಪಟ್ಟಿ ಸೇರ್ಪಡೆಯಿಂದ ಬಚಾವಾಗಿದೆ.ಫೆಬ್ರವರಿ 2020 ರೊಳಗೆ ದೇಶದಲ್ಲಿನ ಭಯೋತ್ಪಾದಕರ ವಿರುದ್ಧ.....

ಒಂದು ಮಹತ್ವದ ಬೆಳವಣಿಗೆಯಲ್ಲಿ ಪಾಕಿಸ್ತಾನವು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಕಪ್ಪುಪಟ್ಟಿ ಸೇರ್ಪಡೆಯಿಂದ ಬಚಾವಾಗಿದೆ.ಫೆಬ್ರವರಿ 2020 ರೊಳಗೆ ದೇಶದಲ್ಲಿನ ಭಯೋತ್ಪಾದಕರ ವಿರುದ್ಧ  ತನ್ನ ಸಂಪೂರ್ಣ ಕ್ರಿಯಾ ಯೋಜನೆಯನ್ನು ಪೂರ್ಣಗೊಳಿಸಬೇಕೆಂದು ಜಾಗತಿಕ ಸಂಸ್ಥೆ ಒತ್ತಾಯಿಸಿದ್ದು ಅದುವರೆಗೆ ಪಾಕಿಸ್ತಾನವು ಗ್ರೇ ಲಿಸ್ಟ್ ನಲ್ಲಿ ಉಳಿಯಲಿದೆ.

ಎಫ್‌ಎಟಿಎಫ್ ಮೂಲಗಳು ಹೇಳಿದಂತೆ  "ಪಾಕಿಸ್ತಾನವು ತನ್ನ ಕಳಪೆ ಸಾಧನೆಯ ಕಾರಣದಿಂಡ ಆದಷ್ಟು ಶೀಘ್ರ  ಗ್ರೇ ಪಟ್ಟಿಯಿಂದ ನಿರ್ಗಮಿಸುವ ಸಾಧ್ಯತೆಗಳಿದೆ,.ಫೆಬ್ರವರಿ 2020ರಲ್ಲಿ ಪಾಕ್ ಭಯೋತ್ಪಾದನೆ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳದೆ ಹೋದಲ್ಲಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಖಾತ್ರಿಯಾಗಲಿದೆ"

ಮುಂದಿನ ಫೆಬ್ರವರಿಯ ವೇಳೆಗೆ  ಅದರ ಕ್ರಿಯಾ ಯೋಜನೆಯ ಸಂಪೂರ್ಣ ವ್ಯಾಪ್ತಿಯಲ್ಲಿ ಗಮನಾರ್ಹ ಮತ್ತು ಸುಸ್ಥಿರ ಪ್ರಗತಿಯನ್ನು ಸಾಧಿಸದಿದ್ದರೆ ಎಫ್‌ಎಟಿಎಫ್ ಅದರ ವಿರುದ್ಧ ದಿಟ್ಟ ಕ್ರಮಕ್ಕೆ ಮುಂದಾಗಲಿದೆ. ಅದರಲ್ಲಿ ಎಫ್‌ಎಟಿಎಫ್ ಸದಸ್ಯ ರಾಷ್ಟ್ರಗಳೊಡನೆ ವ್ಯಾಪಾರ ಸಂಬಂಧ, ನಿರ್ಬ್ವಂಧನೆಯೂ ಸೇರಲಿದೆ."ಪಾಕಿಸ್ತಾನವು 27 ಕ್ರಿಯಾಶೀಲ ಕಾರ್ಯಗಳ ಪೈಕಿ ಪೈಕಿ ಐದನ್ನು ಮಾತ್ರ ಪರಿಹರಿಸಿದೆ, ಉಳಿದ ಕ್ರಿಯಾ ಯೋಜನೆಯಲ್ಲಿ ವಿವಿಧ ಹಂತದ ಪ್ರಗತಿ ಸಾಧಿಸುತ್ತಾ ಇದೆ" ಪಾಕಿಸ್ತಾನದ ಕುರಿತಾದ ತನ್ನ ಹೇಳಿಕೆಯಲ್ಲಿ ಎಫ್‌ಎಟಿಎಫ್ ಬಳಸುವ ಭಾಷೆಯು ಇರಾನ್‌ಗೆ ಬಳಸಿರುವಂತೆಯೇ ಇದ್ದಿರುವುದು ಕಂಡುಬಂದಿದೆ. ಇರಾನ್ ಇದಾಗಲೇ ಬ್ಲ್ಯಾಕ್ ಲಿಸ್ಟ್ (ಕಪ್ಪು ಪಟ್ಟಿ)ಗೆ ಸೇರ್ಪಡೆಯಾಗಿದೆ.

2018 ರ ಜೂನ್‌ನಲ್ಲಿ ಎಫ್‌ಎಟಿಎಫ್ ಪಾಕಿಸ್ತಾನವನ್ನು ಗ್ರೇ ಲಿಸ್ಟ್ ನಲ್ಲಿ ಇರಿಸಿತ್ತು.ಹಾಗೆಯೇ 27 ಅಂಶಗಳ ಕ್ರಿಯಾ ಯೋಜನೆಯ ಅನುಷ್ಠಾನವನ್ನು ಪೂರ್ಣಗೊಳಿಸಲು 15 ತಿಂಗಳು ಕಾಲಾವಕಾಶ ನೀಡಿತು.  ಮತ್ತು ಇದನ್ನು ತಪ್ಪಿದರೆ ಇರಾನ್, ಉತ್ತರ ಕೊರಿಯಾಗಳಂತಹಾ ರಾಷ್ಟ್ರಗಳಿರುವ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ಸಹ ಹೇಳೀದೆ.

ವರದಿಗಳ ಪ್ರಕಾರ, ಫಲಿತಾಂಶವನ್ನು ತನ್ನ ಪರವಾಗಿ ಮ್ನಾಡಿಕೊಳ್ಳಲು ಪಾಕ್ ಇನ್ನಿಲ್ಲದ ಲಾಬಿ ಮಾಡುತ್ತಿದೆ.ಇನ್ನು ಈ ವರ್ಷ ಪಾಕಿಸ್ತಾನದ ಎಲ್ಲಾ ಋತುವಿನ ಮಿತ್ರ ರಾಷ್ಟ್ರ ಚೀನಾ  ಎಫ್‌ಎಟಿಎಫ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT