ಭದ್ರೇಶ್ ಕುಮಾರ್ 
ವಿದೇಶ

ಎಫ್ ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಗುಜರಾತ್ ವ್ಯಕ್ತಿ: ಅಮೆರಿಕ, ಭಾರತದಲ್ಲಿ ತೀವ್ರ ಶೋಧ

ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿರುವ ಗುಜರಾತಿನ ಈ ವ್ಯಕ್ತಿ ಅಮೆರಿಕದ ಎಫ್ ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದು, ಈತನಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಅಮೆರಿಕ ಹಾಗೂ ಭಾರತದಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.

ವಾಷಿಂಗ್ಟನ್: ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿರುವ ಗುಜರಾತಿನ ಈ ವ್ಯಕ್ತಿ ಅಮೆರಿಕದ ಎಫ್ ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದು, ಈತನಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಅಮೆರಿಕ ಹಾಗೂ ಭಾರತದಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.

ಅಹಮ್ಮದಾಬಾದ್ ಮೂಲದ ಭದ್ರೇಶ್ ಕುಮಾರ್ ಪಟೇಲ್ ಅಮೆರಿಕದ ಎಫ್ ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಆರೋಪಿಯಾಗಿದ್ದು, ಪತ್ನಿ ಹಂತಕನ ಬಗ್ಗೆ ಸುಳಿವು ನೀಡಿದವರಿಗೆ 100,000 ಅಮೆರಿಕನ್ ಡಾಲರ್ ಬಹುಮಾನ ಘೋಷಿಸಲಾಗಿದೆ.

ಭದ್ರೇಶ್ ಕುಮಾರ್ ಅತೀ ಕ್ರೂರ ಹಂತಕ ಎಂದು ಎಫ್ ಬಿಐ ಪರಿಗಣಿಸಿದೆ. ಈತ ತುಂಬಾ ಅಪಾಯಕಾರಿ ವ್ಯಕ್ತಿಯಾಗಿದ್ದು, ಮೇರಿಲ್ಯಾಂಡ್ ನ ಹಾನೋವರ್ ಡಂಕಿನ್ ಡೋನಟ್ಸ್ ಸ್ಟೋರ್ ನಲ್ಲಿ ತನ್ನ ಪತ್ನಿಯನ್ನು ಅಮಾನುಷ ರೀತಿಯಲ್ಲಿ ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ.

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತಲೆ ಮರೆಸಿಕೊಂಡು ಓಡಾಡುತ್ತಿರುವ ಭದ್ರೇಶ್ ಕುಮಾರ್ ಹೆಸರು 2019ರ ಎಫ್ ಬಿಐ ಪಟ್ಟಿಯಲ್ಲಿಯೂ ನಮೂದಿಸಲಾಗಿದೆ. 2017ರಲ್ಲಿಯೂ ಭದ್ರೇಶ್ ಟಾಪ್ 10 ಕ್ರಿಮಿನಲ್ ಪಟ್ಟಿಯಲ್ಲಿದ್ದ ಎಂದು ವರದಿ ವಿವರಿಸಿದೆ.

24ವರ್ಷ ಭದ್ರೇಶ್ ಕುಮಾರ್ ಪಟೇಲ್ ಹಾಗೂ 21 ವರ್ಷದ ಆತನ್ನ ಪತ್ನಿ ಪಾಲಕ್ ಡಂಕಿನ್ ಡೋನಟ್ಸ್ ಸ್ಟೋರ್ ನಲ್ಲಿ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಿಸಿಟಿವಿ ಫೂಟೇಜ್ ನಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಭದ್ರೇಶ್ ಮತ್ತು ಪಾಲಕ್ ಒಟ್ಟಾಗಿ ಕಿಚನ್ ರೂಂನೊಳಗೆ ಹೋಗಿದ್ದರು. ಈತ ದಿಢೀರ್ ನಾಪತ್ತೆಯಾಗುವವರೆಗೆ ಒಟ್ಟಿಗೆ ಇದ್ದರು. ಕೆಲವೇ ಹೊತ್ತಿನಲ್ಲಿ ಪಟೇಲ್ ಮತ್ತೆ ಕಾಣಿಸಿಕೊಂಡಿದ್ದ. ನಂತರ ಪಟೇಲ್ ಕಿಚನ್ ಕೋಣೆಯಲ್ಲಿದ್ದ ಒವನ್ ಸ್ವಿಚ್ ಆಫ್ ಮಾಡಿ, ಸ್ಟೋರ್ ನಿಂದ ಏನೂ ನಡೆದೇ ಇಲ್ಲ ಎಂಬಂತೆ ಹೊರಬಂದಿದ್ದ. ಆತನ ದೈಹಿಕ ನಡವಳಿಕೆ, ಮುಖಭಾವ ಎಲ್ಲವೂ ಸಹಜವಾಗಿಯೇ ಇದ್ದಿರುವುದಾಗಿ ವರದಿ ವಿವರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!