ವಿದೇಶ

ಭಾರತೀಯ ಅಮೆರಿಕನ್ನರೊಂದಿಗೆ ಟ್ರಂಪ್ ದೀಪಾವಳಿ ಆಚರಣೆ: ಧಾರ್ಮಿಕ ಸ್ವಾತಂತ್ರ್ಯದ ಸಂಕೇತ ಎಂದು ಬಣ್ಣನೆ

Sumana Upadhyaya

ವಾಷಿಂಗ್ಟನ್: ವಿಶ್ವದಲ್ಲಿರುವ ಹಿಂದೂ, ಜೈನ, ಸಿಖ್ ಮತ್ತು ಬೌದ್ಧ ಧರ್ಮೀಯರಿಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬೆಳಕಿನ ಹಬ್ಬ ದೀಪಾವಳಿಯನ್ನು ಅಮೆರಿಕಾದಲ್ಲಿ ಆಚರಿಸುವ ಮೂಲಕ ದೇಶದ ಧಾರ್ಮಿಕ ಸ್ವಾತಂತ್ರ್ಯದ ಮಹತ್ವ ಸಾರುತ್ತದೆ ಎಂದಿದ್ದಾರೆ.


ಅವರು ನಿನ್ನೆ ಒವಲ್ ಕಚೇರಿಯಲ್ಲಿ ಭಾರತೀಯ ಅಮೆರಿಕನ್ನರೊಂದಿಗೆ ದೀಪಾವಳಿ ಆಚರಿಸಿದರು. ಕಾರ್ಯಕ್ರಮಕ್ಕೆ ಪತ್ರಕರ್ತರಿಗೆ ಅವಕಾಶವಿರಲಿಲ್ಲ. ದೀಪಾವಳಿ ಹಬ್ಬ ಆಚರಣೆಯ ನಂತರ ಅವರು ಹೇಳಿಕೆ ಬಿಡುಗಡೆ ಮಾಡಿ, ಅಮೆರಿಕಾದಾದ್ಯಂತ ದೀಪಾವಳಿಯ ಆಚರಣೆಯು ನಮ್ಮ ರಾಷ್ಟ್ರದ ಒಂದು ಪ್ರಮುಖ ಸಿದ್ಧಾಂತವಾದ ಧಾರ್ಮಿಕ ಸ್ವಾತಂತ್ರ್ಯದ ಮಹತ್ವದ ಜ್ಞಾಪನೆಯಾಗಿದೆ ಎಂದಿದ್ದಾರೆ.


ಪ್ರತಿಯೊಬ್ಬರೂ ತಮ್ಮ ತಮ್ಮ ನಂಬಿಕೆ ಮತ್ತು ಆತ್ಮಸಾಕ್ಷಿಗೆ ತಕ್ಕಂತೆ ಹಬ್ಬಗಳನ್ನು ಆಚರಿಸುವುದಕ್ಕೆ ನನ್ನ ಸಹಮತವಿದೆ ಎಂದು ಟ್ರಂಪ್ ಹೇಳಿದ್ದಾರೆ. ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಲ್ಲಿ ಬೆಳಕನ್ನು ತರಲಿ ಎಂದು ನಾನು ಮತ್ತು ಮೆಲಾನಿಯಾ ಆಶಿಸುತ್ತೇವೆ ಎಂದಿದ್ದಾರೆ.

SCROLL FOR NEXT