ವಿದೇಶ

ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆ ಪರಿಹರಿಸಿಕೊಳ್ಳಲು ಬಯಸಿದ್ದೇವೆ: ಪಾಕ್ ಸಚಿವ ಖುರೇಶಿ 

Manjula VN

ನವದೆಹಲಿ: ಭಾರತ ಜೊತೆಗಿನ ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬಯಸಿದ್ದೇವೆಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಶಿ ಮಂಗಳವಾರ ಹೇಳಿದ್ದಾರೆ. 

ಆಂತರಿಕ ಹಾಗೂ ಬಾಹ್ಯ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ವಿದೇಶಾಂಗ ನೀತಿಯನ್ನು ರಚಿಸಿದೆ. ಪರಿಣಾಮಕಾರಿಯಾದ ವಿದೇಶಾಂಗ ನೀತಿಯಿಂದಲೇ ಪಾಕಿಸ್ತಾನ ವಿಶ್ವದಲ್ಲಿ ಹೆಸರು ಮಾಡಿದೆ ಎಂದು ಹೇಳಿದ್ದಾರೆ. 

ಇತ್ತೀಚೆಗಷ್ಟೇ ಭಾರತ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ ನೀಡಿದ್ದ ಆರ್ಟಿಕಲ್ 370ನ್ನು ರದ್ದು ಮಾಡಿತ್ತು. ಭಾರತದ ಈ ನಿರ್ಧಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತಲ್ಲದೇ, ಭಾರತದ ನಿರ್ಧಾರಕ್ಕೆ ಪ್ರಶಂಸೆಗಳು ವ್ಯಕ್ತವಾಗಿದ್ದವು. ಆದರೆ, ಪಾಕಿಸ್ತಾನ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. 

SCROLL FOR NEXT