ವಿದೇಶ

ಮಾವು, ವಿಳ್ಯದೆಲೆ ಬಳಿಕ ಇದೀಗ ಎಂಡಿಹೆಚ್ ಮಸಾಲೆ ಮೇಲೆ ಅಮೆರಿಕ ನಿಷೇಧ, ಕಾರಣ..?

Srinivasamurthy VN

ನ್ಯೂಯಾರ್ಕ್: ಈ ಹಿಂದೆ ಭಾರತದ ಮಾವು ಮತ್ತು ವೀಳ್ಯದೆಲೆ ಮೇಲೆ ನಿಷೇಧ ಹೇರಿದ್ದ ಅಮೆರಿಕ ಇದೀಗ ಭಾರತದ ಮಸಾಲೆ ಪದಾರ್ಥವೊಂದರ ಮೇಲೆ ನಿಷೇಧ ಹೇರಿದೆ.

ಮೂಲಗಳ ಪ್ರಕಾರ ಭಾರತದ ಖ್ಯಾತ ಎಂಡಿಎಚ್‌ 'ಸಾಂಬರ್‌ ಮಸಾಲ' ಪುಡಿ ಮಿಕ್ಸ್ ಮೇಲೆ ಅಮೆರಿಕ ಸರ್ಕಾರ ನಿಷೇಧ ಹೇರಿದ್ದು, ಎಂಡಿಎಚ್‌ 'ಸಾಂಬರ್‌ ಮಸಾಲ' ಪುಡಿ ಮಿಕ್ಸ್ ನಲ್ಲಿ ಸಾಲ್ಮೊನೆಲ್ಲ ಎಂಬ ಬ್ಯಾಕ್ಟೀರಿಯಾ ಕಂಡುಬಂದಿದೆ ಎಂದು ಆರೋಪಿಸಿ, ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ನಿಷೇಧಿಸಿದೆ.

ಮೂಲಗಳ  ಪ್ರಕಾರ ಆರ್ ಪ್ಯೂರ್ ಆಗ್ರೋ ಸ್ಪೆಷಾಲಿಟೀಸ್ ಸಿದ್ಧಪಡಿಸಿದ್ದ ಹಾಗೂ ಹೌಸ್ ಆಫ್ ಸ್ಪೈಸಸ್ (ಇಂಡಿಯಾ) ಮಾರಾಟ ಮಾಡಿದ್ದ ಈ ಉತ್ಪನ್ನವನ್ನು ಎಫ್‌ಡಿಎ  ಪರೀಕ್ಷೆಗೆ ಒಳಪಡಿಸಿತ್ತು. ಉತ್ಪನ್ನದಲ್ಲಿ ಸಾಲ್ಮೊನೆಲ್ಲ ಬ್ಯಾಕ್ಟೀರಿಯ ಇರುವುದು ಅದರಿಂದ ದೃಢಪಟ್ಟಿದೆ ಎನ್ನಲಾಗಿದೆ. ಬ್ಯಾಕ್ಟೀರಿಯಾ ಪತ್ತೆಯಾದ ಸಾಂಬಾರ್‌ ಮಸಾಲವನ್ನು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ವಿತರಿಸಲಾಗಿತ್ತು. ಇದೀಗ ಉತ್ಪನ್ನಗಳನ್ನು ವಾಪಸ್‌ ಪಡೆಯಲಾಗಿದೆ. ಎಂದು ಆನ್‌ಲೈನ್‌ ಮಾರಾಟ ಮಳಿಗೆ ಹೌಸ್‌ ಆಫ್‌ ಸ್ಪೈಸಸ್‌ ತಿಳಿಸಿದೆ. 

ಇನ್ನು ಅತ್ತ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್ ಡಿಎ) ಆದೇಶದ ಬೆನ್ನಲ್ಲೇ ಎಂಡಿಹೆಚ್ ಸಂಸ್ಥೆಯೇ ತನ್ನ ಉತ್ಪನ್ನಗಳಲ್ಲಿ ಕನಿಷ್ಠ ಮೂರು ಉತ್ಪನ್ನಗಳನ್ನು ಅಮೆರಿಕ ಮಾರುಕಟ್ಟೆಯಿಂದ ಹಿಂಪಡೆದಿದೆ. 

ಸಾಲ್ಮೋನೆಲ್ಲಾ ಎಂಬುದು ಬ್ಯಾಕ್ಟೀರಿಯಾ. ಆಹಾರಗಳ ಮೂಲಕ ಪಸರಿಸುವ ಸೋಂಕಾಗಿದ್ದು, ಈ ಸೋಂಕು ತಗುಲಿ 12 ಗಂಟೆಯ ಬಳಿಕ ಅತಿಸಾರ, ಬೇಧಿ, ಹೊಟ್ಟೆ ನೋವು, ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮ ಆರೋಗ್ಯ ಗಂಭೀರ ಸ್ಥಿತಿಗೂ ತಲುಪುತ್ತದೆ. ಸಾಲ್ಮೊನೆಲ್ಲ ಬ್ಯಾಕ್ಟೀರಿಯಾ ಇದೇ ಎಂದೇ ಅಮೆರಿಕ ಈಗಾಗಲೇ ಭಾರತದ ಸಾಕಷ್ಟು ಪದಾರ್ಥಗಳ ಆಮದನ್ನು ನಿಷೇಧಿಸಿದೆ.

SCROLL FOR NEXT