ದಾಳಿ ನಂತರ ಕಾಣಿಸಿಕೊಂಡ ಬೆಂಕಿ 
ವಿದೇಶ

ಸೌದಿ ಅರೇಬಿಯಾದ ಪ್ರಮುಖ ತೈಲ ನಿಕ್ಷೇಪದ ಮೇಲೆ ಡ್ರೋನ್ ದಾಳಿ: ಸಚಿವಾಲಯ ಮಾಹಿತಿ 

ಸೌದಿ ಅರೇಬಿಯಾದ ಪೂರ್ವ ಭಾಗದ ತೈಲ ನಿಕ್ಷೇಪ ಮತ್ತು ಸೌದಿ ಅರಮ್ಕೊ ಸಂಸ್ಕರಣಾ ಘಟಕದ ಮೇಲೆ ಡ್ರೋನ್ ದಾಳಿ ನಡೆಸಿದ ಘಟನೆ ಶನಿವಾರ ನಡೆದಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.  

ದುಬೈ: ಸೌದಿ ಅರೇಬಿಯಾದ ಪೂರ್ವ ಭಾಗದ ತೈಲ ನಿಕ್ಷೇಪ ಮತ್ತು ಸೌದಿ ಅರಮ್ಕೊ ಸಂಸ್ಕರಣಾ ಘಟಕದ ಮೇಲೆ ಡ್ರೋನ್ ದಾಳಿ ನಡೆಸಿದ ಘಟನೆ ಶನಿವಾರ ನಡೆದಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. 


ಇಂದು ನಸುಕಿನ ಜಾವ ಈ ಘಟನೆ ನಡೆದಿದ್ದು ಬೃಹತ್ ಬೆಂಕಿ ಕಾಣಿಸಿಕೊಂಡಿದೆ. ಈ ಹಿಂದೆ ಯೆಮನ್ ನ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದರು. ದಾಳಿಯ ಹೊಣೆಯನ್ನು ಇದುವರೆಗೆ ಯಾವುದೂ ಹೊತ್ತುಕೊಂಡಿಲ್ಲ.


ಬುಖ್ಯಾಖ್ ಮತ್ತು ಖುರೈಸ್ ತೈಲ ಘಟಕಗಳ ಸಂಸ್ಕರಣಾ ಘಟಕಗಳ ಮೇಲೆ ನಡೆದ ದಾಳಿಯಲ್ಲಿ ಯಾರಿಗಾದರೂ ಹಾನಿಯುಂಟಾಗಿದೆಯೇ ಎಂಬ ಬಗ್ಗೆ ಇದುವರೆಗೆ ಮಾಹಿತಿ ಸಿಕ್ಕಿಲ್ಲ. ಆನ್ ಲೈನ್ ವಿಡಿಯೊದಲ್ಲಿ ಬುಖ್ಯಾಖ್ ನಲ್ಲಿ ಹಿಂದುಗಡೆ ಬಂದೂಕುದಾಳಿಯಾದ ಶಬ್ದ ಕೇಳುತ್ತಿದೆ. ಆಕಾಶದೆತ್ತರಕ್ಕೆ ಹೊಗೆ ಕಾಣಿಸಿಕೊಂಡಿದೆ. ಈ ಸ್ಥಳವನ್ನು ಡ್ರೋನ್ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ ನಂತರ ಬೆಂಕಿ ಕಾಣಿಸಿಕೊಂಡಿತು ಎಂದು ಆಂತರಿಕ ಸಚಿವಾಲಯ ಹೇಳಿದೆ.


ಸುದ್ದಿಸಂಸ್ಥೆಗೆ ಅರಮ್ಕೊ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲಿಲ್ಲ.ಬುಕ್ಯಾಕ್‌ನಲ್ಲಿರುವ ಅಬ್ಕೈಕ್ ತೈಲ ಸಂಸ್ಕರಣಾ ಘಟಕವುವಿಶ್ವದ ಅತಿದೊಡ್ಡ ಕಚ್ಚಾ ತೈಲ ಸ್ಥಿರೀಕರಣ ಘಟಕವಾಗಿದೆ. ಇಲ್ಲಿ ಕಚ್ಚಾ ತೈಲವನ್ನು ಸಿಹಿ ಕಚ್ಚಾ ತೈಲ ಆಗಿ ಪರಿವರ್ತಿಸಿ ನಂತರ ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರದ ಟ್ರಾನ್ಸ್‌ಶಿಪ್ಮೆಂಟ್ ಪಾಯಿಂಟ್‌ಗಳಿಗೆ ಸಾಗಿಸುತ್ತದೆ. ಇಲ್ಲಿ ದಿನಕ್ಕೆ 7 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.


ಈ ಘಟಕದ ಮೇಲೆ ಹಿಂದೆ ಉಗ್ರಗಾಮಿಗಳು ದಾಳಿ  ನಡೆಸಲು ಸಂಚು ರೂಪಿಸಿದ್ದರು. 2006ರಲ್ಲಿ ಆಲ್ ಖೈದಾ ಆತ್ಮಹತ್ಯಾ ದಾಳಿಕೋರ ತೈಲ ಸಂಕೀರ್ಣದ ಮೇಲೆ ದಾಳಿ ನಡೆಸಲು ನೋಡಿ ವಿಫಲನಾಗಿದ್ದ. 


ದಾಳಿ ಹಿನ್ನಲೆಯಲ್ಲಿ ಈ ವಾರಾಂತ್ಯ ತೈಲ ಮಾರುಕಟ್ಟೆ ರಜೆ ಇರುವುದರಿಂದ ತಕ್ಷಣಕ್ಕೆ ತೈಲ ಬೆಲೆ ಮೇಲೆ ಪರಿಣಾಮ ಬೀರಲಿಕ್ಕಿಲ್ಲ. ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 60 ಡಾಲರ್ ಗಿಂತ ಹೆಚ್ಚಾಗಿದೆ.


ಸೌದಿ ಅರೇಬಿಯಾ ರಾಜಧಾನಿ ರಿಯಾದ್ ನಿಂದ ಈಶಾನ್ಯಕ್ಕೆ ಬುಖ್ಯಾಖ್ 330 ಕಿಲೋ ಮೀಟರ್ ದೂರದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

4 IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ; ಯಾರಿಗೆಲ್ಲಾ ಬದಲಾವಣೆ

ಆಧಾರ ರಹಿತ ಆರೋಪ ಸರಿಯಲ್ಲ, ‘ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ; HDK NICE ಆರೋಪಕ್ಕೆ ಸಚಿವ ಬಾಲಕೃಷ್ಣ ತಿರುಗೇಟು

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ