ವಿದೇಶ

ಭೂಕಂಪನ: ಪಾಕ್ ನಲ್ಲಿ ಸಾವಿನ ಸಂಖ್ಯೆ 26ಕ್ಕೆ ಏರಿಕೆ, ಪಿಒಕೆಯಲ್ಲಿ 300 ಮಂದಿಗೆ ಗಾಯ

Srinivasamurthy VN

ಇಸ್ಲಾಮಾಬಾದ್: ನಿನ್ನೆ ಸಂಭವಿಸಿದ ಭೀಕರ ಭೂಕಂಪನದಲ್ಲಿ ಪಾಕಿಸ್ತಾನದಲ್ಲಿ ಸಾವಿಗೀಡಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಗಾಯಾಳುಗಳ ಸಂಖ್ಯೆ 300ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ಮತ್ತು ಭಾರತದ ಕೆಲವು ಭಾಗಗಳಲ್ಲಿ ಮಂಗಳವಾರ ಸಂಜೆ ಭಾರಿ ಪ್ರಮಾಣದ ಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿತ್ತು. 

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಪ್ರಕಾರ, 5.8-ತೀವ್ರತೆಯ ಕಂಪನವು 10 ಕಿ.ಮೀ ಆಳದಲ್ಲಿ ಅಪ್ಪಳಿಸಿದ್ದು, ಭೂಕಂಪನದ ಕೇಂದ್ರಬಿಂದು ಪಿಒಕೆಯ ಮಿರ್‌ಪುರದ ಆಗ್ನೇಯಕ್ಕೆ ಒಂದು ಕಿ.ಮೀ ದೂರದಲ್ಲಿ ಮತ್ತು 10 ಕಿ.ಮೀ ಆಳದಲ್ಲಿ ದಾಖಲಾಗಿದೆ. 

ಇನ್ನು ಭೂಕಂಪನದಲ್ಲಿ 300ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಅವಶೇಷಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಅಂತೆಯೇ ಕಂಪನದ ತೀವ್ರತೆಗೆ ಪಿಒಕೆಯಲ್ಲಿನ ರಸ್ತೆಗಳಲ್ಲಿ ಆಳವಾದ ಕಂದಕ ಸೃಷ್ಟಿಯಾಗಿದೆ.

SCROLL FOR NEXT